ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧೆಡೆ ಗಣೇಶ ಮೂರ್ತಿಗಳ ವಿಸರ್ಜನೆ

Published : 14 ಸೆಪ್ಟೆಂಬರ್ 2024, 16:00 IST
Last Updated : 14 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಕಮಲನಗರ: ತಾಲ್ಲೂಕಿನ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಶಾಂತಿಯುತವಾಗಿ ವಿಸರ್ಜನೆ ಮಾಡಲಾಯಿತು.

ಕಮಲನಗರದ ರಸ್ತೆಯಲ್ಲಿರುವ ವ್ಯಾಪಾರ ಗಣೇಶ ಮಂಡಳಿಯ ವಿಘ್ನೇಶ್ವರನ ಮೆರವಣಿಗೆಗೆ ಮಂಡಳಿಯ ಅಧ್ಯಕ್ಷ ಶಿವಾನಂದ ವಡ್ಡೆ ಚಾಲನೆ ನೀಡಿದರು. ಮಂಡಳಿಯ ಸದಸ್ಯರು ಮತ್ತು ಸಾರ್ವಜನಿಕರು ಮೆರವಣಿಗೆಯಲ್ಲಿ ಗಣೇಶನ ಹಾಡಿಗೆ ಹೆಜ್ಜೆ ಹಾಕಿದರು.

ಹಿಂದೂ ಗಣೇಶ ಮಂಡಳಿಯ ಮೆರವಣಿಗೆಗೆ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಲಿಂಗಾನಂದ ಮಹಾಜನ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ತಾಲ್ಲೂಕಿನ ಎಲ್ಲ ಕಡೆ ಭಾಗಶಃ ಗಣೇಶ ಮೂರ್ತಿಗಳ ವಿಸರ್ಜನೆ ಮುಗಿದಿವೆ. ಎಲ್ಲೂ ಗಲಾಟೆ ನಡೆದಿಲ್ಲ ಎಂದು ಸಿಪಿಐ ಅಮರಪ್ಪ ಶಿವಬಲ್ ತಿಳಿಸಿದರು.

ತಾಲ್ಲೂಕಿನ 15 ಕಡೆಗಳಲ್ಲಿ ಗಣೇಶನ ವಿಸರ್ಜನೆ ಬಾಕಿ ಇದೆ. ಅದಕ್ಕಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ ಎಂದು ಎಸ್‌ಐ ಚಂದ್ರಶೇಖರ ನಿರ್ಣೆ ಮಾಹಿತಿ ನೀಡಿದರು.

ಕಮಲನಗರದ ವ್ಯಾಪಾರ ಗಣೇಶ ಮಂಡಳಿಯ ವಿಘ್ನೇಶ್ವರನ ವಿಸರ್ಜನೆಯ ಮೆರವಣಿಗೆಗೆ ಮಂಡಳಿಯ ಅಧ್ಯಕ್ಷ ಶಿವಾನಂದ ವಡ್ಡೆ ಚಾಲನೆ ನೀಡಿದರು. ಮಂಡಳಿಯ ಸದಸ್ಯರು ಭಾಗವಹಿಸಿದ್ದರು
ಕಮಲನಗರದ ವ್ಯಾಪಾರ ಗಣೇಶ ಮಂಡಳಿಯ ವಿಘ್ನೇಶ್ವರನ ವಿಸರ್ಜನೆಯ ಮೆರವಣಿಗೆಗೆ ಮಂಡಳಿಯ ಅಧ್ಯಕ್ಷ ಶಿವಾನಂದ ವಡ್ಡೆ ಚಾಲನೆ ನೀಡಿದರು. ಮಂಡಳಿಯ ಸದಸ್ಯರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT