ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹25 ಕೋಟಿ ನೀಡಿ ಕಾರ್ಖಾನೆ ಪ್ರಾರಂಭಿಸುವೆ’

Last Updated 5 ಏಪ್ರಿಲ್ 2021, 2:37 IST
ಅಕ್ಷರ ಗಾತ್ರ

ಹುಮನಾಬಾದ್‌: ‘ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಯ ಗಳಿಸಿದರೆ ಕಾರ್ಖಾನೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದು ಬಿಎಸ್‍ಎಸ್‍ಕೆ ನಿರ್ದೇಕರ ಚುನಾವಣೆ ಅಭ್ಯರ್ಥಿ ಸುಭಾಷ ಗಂಗಾ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಖಾನೆ ಸೂಕ್ತ ನಿರ್ವಹಣೆ ಇಲ್ಲದೆ ಎರಡೂವರೆ ವರ್ಷಗಳಿಂದ ಬಂದ್‌ ಆಗಿದೆ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ’ ಎಂದರು.

‘ಏಪ್ರಿಲ್‌ 6ರಂದು ಕಾರ್ಖಾನೆಯ ಆವರಣದಲ್ಲಿ ಚುನಾ ವಣೆ ನಡೆಯಲಿದೆ. ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಸರ್ವ ಸದಸ್ಯರು ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೆ, ನನ್ನೆಲ್ಲ ಸಹೋದರರ ಸಹಮತಿಯೊಂದಿಗೆ ಗಂಗಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ₹25 ಕೋಟಿ ನೆರವು ನೀಡಿ ಕಾರ್ಖಾನೆಯ ಪುನಃ ಆರಂಭಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

‘ರೈತರ ಹಾಗೂ ಕಾರ್ಖಾನೆಯ ಕಾರ್ಮಿಕರ ಸ್ಥಿತಿಗತಿಗಳನ್ನು ಅರಿತು ಕಳೆದ ಆಗಸ್ಟ್ ತಿಂಗಳಲ್ಲಿ ಕಾರ್ಖಾನೆ ಆರಂಭಿಸಲು ಗಂಗಾ ಚಾರಿಟೇಬಲ್ ಟ್ರಸ್ಟ್‌ಗೆ ಲೀಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರಿಗೆ ಮನವಿ ಮಾಡಿದ್ದೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಸುಮ್ಮನಾದೆ. ಈಗ ಸರ್ಕಾರ ಚುನಾವಣೆ ಘೋಷಣೆ ಮಾಡಿದೆ’ ಎಂದರು

ಬಾಲಚಂದ್ರ ದುಬಲಗುಂಡಿ, ವೀರೇಶ ಹುಮನಾಬಾದ್, ಸಂಜುಕುಮಾರ ಖಟಕಚಿಂಚೋಳಿ, ಮಹೇಶ ದುಬಲಗುಂಡಿ, ರಾಜಶೇಖರ ವರವಟ್ಟಿ, ಪ್ರಭು ದುಬಲಗುಂಡಿ, ರಾಹುಲ್ ವರವಟ್ಟಿ, ಶ್ರೀಶೈಲ್ ಕಲ್ಲೂರ್, ಲೋಕೇಶ ಹಣಮಂತವಾಡಿ, ಮಸ್ತಾನ್ ದುಬಲಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT