ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ದೇಗುಲದಲ್ಲಿ ಮೂಲಸೌಕರ್ಯ ಒದಗಿಸಿ

ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಸಭೆ
Last Updated 29 ಜುಲೈ 2021, 4:17 IST
ಅಕ್ಷರ ಗಾತ್ರ

ಚಿಟಗುಪ್ಪ: ‘ತಾಲ್ಲೂಕಿನ ಚಾಂಗಲೇರಾ ವೀರಭದ್ರೇಶ್ವರ ದೇಗುಲದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಾಮಗಾರಿಗಳನ್ನು ಆರಂಭಿಸಬೇಕು’ ಎಂದು ಉಪವಿಭಾಗಾಧಿಕಾರಿ ಭುವನೇಶ್‌ ದೇವಿದಾಸ್‌ ಪಾಟೀಲ ಹೇಳಿದರು.

ಬುಧವಾರ ತಾಲ್ಲೂಕಿನ ಚಾಂಗಲೇರಾದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ವೀರಭದ್ರೇಶ್ವರ ದೇಗುಲದ ಸಮಗ್ರ ಅಭಿವೃದ್ಧಿಗಾಗಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಪಿಆರ್‌ಇ ಯೋಜನೆ ಅಡಿಯಲ್ಲಿ ಯಾತ್ರಿ ನಿವಾಸದ ಪ್ರಥಮ ಮಹಡಿ ಕಾಮಗಾರಿ ಪೂರ್ಣಗೊಳಿಸುವುದು, ನಿರ್ಮಿತಿ ಕೇಂದ್ರದ ಗೋಶಾಲೆಯ‌ ಶೆಡ್ ಮೂಲ ಸೌಲಭ್ಯಗಳ ಪೂರೈಕೆ, ಜಂಗಮಾರ್ಚನೆ, ಹಾಲು ಭಾಂಡೆ ಸಾಮಗ್ರಿಗಳು ಭಕ್ತರಿಗೆ ವಿತರಿಸುವ ಕೋಣೆ ನಿರ್ಮಾಣ, ದಾಸೋಹ ಅಡುಗೆ ಕೋಣೆ ದುರಸ್ತಿ, ಸ್ಟ್ರೀಮ್‌ ಬಾಯ್ಲರ್‌ ಅಳವಡಿಕೆ, ನಾಲ್ಕು ವಾಣಿಜ್ಯ ಮಳಿಗೆಗಳ ಕಾಮಗಾರಿ ಪೂರ್ಣಗೊಳಿಸುವುದು, 12 ಟೀನ್‌ ಶೆಡ್‌ ವಾಣಿಜ್ಯ ಮಳಿಗೆ ನಿರ್ಮಾಣ, ಸಿಸಿ ಚರಂಡಿ ನಿರ್ಮಾಣ, ರಥದ ಕೋಣೆ ನಿರ್ಮಾಣ, ಮಹಾ ಮಂಟಪ ನಿರ್ಮಾಣ, ದೇಗುಲದ ಸಾಗುವಳಿ ಭೂಮಿ ಸರ್ವೆ ನೀಲನಕ್ಷೆ ತಯಾರಿಸುವುದು, ಕೇಂದ್ರ ಸರ್ಕಾರದ ಯಾತ್ರಿ ನಿವಾಸದ ನವೀಕರಣ, ಸ್ನಾನಗೃಹಗಳು, ಶೌಚಾಲಯ ನಿರ್ಮಾಣ, ನೂತನ ಬೆಳ್ಳಿ ಪಲ್ಲಕ್ಕಿ ಸಿದ್ಧಪಡಿಸುವುದು, ಮಹಾದ್ವಾರದಿಂದ ದೇಗುಲದ ವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಹಶೀಲ್ದಾರ್‌ ಜಿಯಾವುಲ್ಲ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಜೆಸ್ಕಾಂ, ಗ್ರಾಮ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.

ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾವ ಕುಲಕರ್ಣಿ ಸ್ವಾಗತಿಸಿದರು. ಕಾರ್ಯದರ್ಶಿ ಸಂಜು ದೇಸಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT