ಮಂಗಳವಾರ, ಏಪ್ರಿಲ್ 20, 2021
28 °C

ಬೀದರ್: ಜ್ಞಾನಶಿವಯೋಗಾಶ್ರಮದಲ್ಲಿ ಗೋಶಾಲೆಗೆ ಭೂಮಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ನೌಬಾದ್ ಸಮೀಪದ ಜ್ಞಾನ ಶಿವಯೋಗಾಶ್ರಮ ಪರಿಸರದಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೂತನ ಗೋಶಾಲೆ ನಿರ್ಮಾಣಕ್ಕೆ ಶ್ರೀಶೈಲದ ಚೈತನ್ಯ ಪೀಠದ ಕರುಣಾದೇವಿ ಮಾತೆ ಭೂಮಿ ಪೂಜೆ ನೆರವೇರಿಸಿದರು.

ದೇಸಿ ತಳಿ ಗೋವುಗಳ ರಕ್ಷಣೆಗೆ ಗೋಶಾಲೆ ಆರಂಭಿಸಲಾಗುತ್ತಿದೆ ಎಂದು ಶ್ರೀ ವೈಷ್ಣೋದೇವಿ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಹೇಳಿದರು.

ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಂಚನಾಳ, ಬೀದರ್ ಸಹಾಯಕ ನಿರ್ದೇಶಕ ಡಾ. ರವೀಂದ್ರಕುಮಾರ ಭೂರೆ, ಪ್ರದೀಪ್ ರಾಗಾ, ಉಮಾಕಾಂತ ಜೆಮಶೆಟ್ಟೆ, ದತ್ತು ಬಾವಗೆ, ಶಿವರಾಜ ಕೋಟೆ, ಉಮೇಶ ಸಿದ್ಧೇಶ್ವರೆ, ಶಿವಕುಮಾರ ಮುದಕಾ ಇದ್ದರು.

ನೂತನ ಗೋಶಾಲೆಗೆ ಮಾತೇಶ್ವರಿ ಗೋಶಾಲೆ ಎಂದು ನಾಮಕರಣ ಮಾಡಲಾಯಿತು.
ಶಿಕ್ಷಕ ಸುಭಾಷ ಬಿರಾದಾರ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.