ಶುಕ್ರವಾರ, ಜುಲೈ 30, 2021
20 °C

ಚಿಟಗುಪ್ಪ: ಮೂರು ಮನೆಗಳ ಬೀಗ ಮುರಿದು ಚಿನ್ನಾಭರಣ, ನಗದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಮಂಗಳವಾರ ಮೂರು ಮನೆಗಳ ಬೀಗ ಮುರಿದು ಕಳ್ಳರು ನಗನಾಣ್ಯ, ಚಿನ್ನಾಭರಣ ಕದ್ದಿದ್ದಾರೆ.

ಗ್ರಾಮದ ಚಂದ್ರಕಾಂತ್‌ ಎಂಬುವರ ಮನೆಯ ಬೀಗ ಒಡೆದು ಮನೆಯಲ್ಲಿದ್ದ 2 ಗ್ರಾಂ ತೂಕದ ಬಂಗಾರದ ತಾಳಿ, ಅರ್ಧ ತೊಲಾ ಅಷ್ಟಪೈಲಿ ಗುಂಡು ಸರ ಸೇರಿ ಒಟ್ಟು ₹96 ಸಾವಿರ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.

ಗ್ರಾಮದ ಮಹ್ಮದ್‌ ಇಬ್ರಾಹಿಂ ಮಹ್ಮದ್‌ ಸುಲ್ತಾನ್‌ ಅವರ ಮನೆಯ ಬೀಗ ಒಡೆದು ₹15 ಸಾವಿರ ನಗದು, ಚಿನ್ನದ ಲಾಕೆಟ್‌ ದೋಚಿದ್ದಾರೆ.

ಗ್ರಾಮದ ಗಣೇಶ್‌ ಮಾಣಿಕ ಅವರ ಮನೆಯ ಬೀಗ ಒಡೆದು 1 ತೊಲ ಚಿನ್ನದ ಸರ, ಅರ್ಧ ತೊಲ ಗುಂಡು ಸರ, 6 ಗ್ರಾಂ ತೂಕದ ಅಷ್ಟಮಣಿ ಸರ, 5 ತೊಲ ಬೆಳ್ಳಿ ಉಂಗುರ ಹಾಗೂ ₹1.95 ಲಕ್ಷ ನಗದು ದೋಚಿದ್ದಾರೆ.

ಮನ್ನಾಎಖ್ಖೇಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು