ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ನಿರಂಜನ ಸಂಸ್ಥಾನ ಮಠದ ನೂತನ ಪೀಠಾಧಿಪತಿ ಗುರುಬಸವ ಸ್ವಾಮೀಜಿ ಅವರ ಮೆರವಣಿಗೆ ಗ್ರಾಮದಲ್ಲಿ ವೈಭವದಿಂದ ನೆರವೇರಿತು.

ನಿರಂಜನ ಸಂಸ್ಥಾನ ಮಠದಿಂದ ಅಲಂಕೃತ ಸಾರೋಟಿಯಲ್ಲಿ ಆರಂಭಗೊಂಡ ಶ್ರೀಗಳ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆ, ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಧಾರ್ಮಿಕ ಗೀತೆಗಳಿಗೆ ಹೆಜ್ಜೆ ಹಾಕಿ ಮೆರವಣಿಗೆ ಕಳೆ ಹೆಚ್ಚಿಸಿದರು.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ಸಾವಿರಾರು ಭಕ್ತರು ಭಾಗವಹಿಸಿ ಪಟ್ಟಾಭಿಷೇಕ ಕಾರ್ಯಕ್ರಮದ ವೈಭವದಿಂದ ಕಣ್ತುಂಬಿಕೊಂಡರು. ಶಿವಯೋಗೀಶ್ವರ ಸ್ವಾಮೀಜಿ, ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಗುಗ್ಗೆಹಳ್ಲಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಮುರುಗೋಡ ಮಠದ ನೀಲಕಂಠ ಸ್ವಾಮೀಜಿ, ತಾಂಬಾಳ ಮಠದ ಮುರುಘೇಂದ್ರ ಸ್ವಾಮೀಜಿ ಮತ್ತು ಮಾತೆ ಬಸವಾಂಜಲಿ ತಾಯಿ ಅವರ ಸಾನ್ನಿಧ್ಯದಲ್ಲಿ ನೂತನ ವಟು ಗುರುಬಸವ ದೇಶಿಕರ ಪಟ್ಟಾಧಿಕಾರ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಇದಕ್ಕೆ ನಾಡಿನ ಶರಣ ಪರಂಪರೆಯ ಹಲವು ಪ್ರಮುಖ ಮಠಗಳ ಸ್ವಾಮೀಜಿಗಳು ಸಾಕ್ಷಿಯಾದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಪುರ ಮೂಲದ ಶರಣಯ್ಯ ಚನ್ನಬಸಮ್ಮ ದಂಪತಿಯ ಜೇಷ್ಠ ಪುತ್ರ ಗುರುಬಸವ ದೇಶಿಕರು ಅವರನ್ನು ರಥ ಸಪ್ತಮಿ ಬಾಹ್ಮಿ ಮೂಹೂರ್ತದಲ್ಲಿ ನಿರಂಜನ ಸಂಸ್ಥಾನ ಮಠದ ಶಿವಯೋಗೀಶ್ವರ ಸ್ವಾಮೀಜಿ ಅವರು ಕಿರಿಯ ಶ್ರೀಗಳನ್ನಾಗಿ ವಿದ್ಯುಕ್ತವಾಗಿ ಸ್ವೀಕರಿಸಿದರು. ಪಟ್ಟಕ್ಕೇರಿದ ನೂತನ ಗುರುಬಸವ ದೇಶಿಕರನ್ನು ಜಗದ್ಗುರು ಗುರುಬಸವ ಮಹಾಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ಅವರಿಗೆ ಭಕ್ತರ ಸಮ್ಮುಖದಲ್ಲಿ ದಿವ್ಯಸ್ನಾನ, ಭಸ್ಮರುದ್ರಾಕ್ಷಿಧಾರಣೆ, ಲಿಂಗಾಂಗಾನುಸಂಧಾನ, ಮಂತ್ರೋಪದೇಶ ಸೇರಿ ವಿವಿಧ ವಿಧಿ ವಿಧಾನಗಳು ನಡೆದವು. ವಿವಿಧ ಮಠಗಳ ಮಠಾಧೀಶರು, ಮುಖಂಡರು ಸಮಾರಂಭದಲ್ಲಿ ಭಾಗಿಯಾದರು.

ಪಟ್ಟಾಧಿಕಾರ ಸ್ವೀಕರಿಸಿ ನೂತನ ಗುರುಬಸವ ಸ್ವಾಮೀಜಿ ಮಾತನಾಡಿ, ‘ನಿಮ್ಮ ಮುಡಿಗೆ ಹೂ ತಾರೆನಲ್ಲದೇ, ಹುಲ್ಲು ತಾರೆನು’ ಎಂದು ವಚನವಿತ್ತರು. ‘ಅತಿ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂಬುದರ ಅರಿವು ನನಗಿದೆ. ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಭರವಸೆಗಳಿಗೆ ನಾನು ಮೋಸ ಮಾಡುವುದಿಲ್ಲ. ಮಠದ ಜವಾಬ್ದಾರಿಯನ್ನು ಶಿವಯೋಗೀಶ್ವರ ಸ್ವಾಮೀಜಿ ನೀಡಿದ್ದು, ಅವರ ಮಾರ್ಗದರ್ಶನದಲ್ಲೇ ನಡೆದು ಮಠದ ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ಸಮಾಜದ ಉನ್ನತಿಗೆ ಮಠಗಳ ಕೊಡುಗೆ ಅಪಾರ: ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲದೇ, ದಾಸೋಹ, ಶಿಕ್ಷಣ, ಆಧ್ಯಾತ್ಮ, ಸಾಮಾಜಿಕ ಸೇವೆಗಳ ಮೂಲಕ ಸಮಾಜದ ಉನ್ನತಿಗೆ ಅಪಾರ ಕೊಡುಗೆ ನೀಡುತ್ತಿವೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠ ಮುರುಘರಾಜೇಂದ್ರ ಮಹಾ:ಸಂಸ್ಥಾನ ಮಠ ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಭಾತಂಬ್ರಾ ಗ್ರಾಮದ ನಿರಂಜನ ಸಂಸ್ಥಾನ ಮಠದಲ್ಲಿ ಗುರುಬಸವ ದೇಶೀಕರ ಪಟ್ಟಾಭಿಷೇಕ ನಿಮಿತ್ತ ಭಾನುವಾರ ಆಯೋಜಿಸಿದ್ದ ಶೂನ್ಯತತ್ವ ಪೀಠಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಠಗಳು ದೀಪದಂತೆ ತನ್ನನ್ನು ತಾನು ಸುಟ್ಟುಕೊಂಡು ಬೆಳಕನ್ನು ನೀಡುತ್ತಿವೆ. ಸೇವೆ ಹಾಗೂ ತ್ಯಾಗದ ಸಂಗಮ ಸ್ವಾಮೀಜಿ ಆಗಿರುತ್ತಾರೆ. ಅವರಿಗೆ ಸಮಾಜವೇ ತಾಯಿ, ತಂದೆ, ಬಂಧುಗಳಾಗಿರುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ಭಾಗದಲ್ಲಿ ಭಕ್ತರ ಸಹಕಾರದಿಂದ ಮಠದ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದ್ದೇನೆ ಎಂದು ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು. ಗೂಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ, ಜಯಶಾಂತಲಿಂಗ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಅವಧೂತರು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಿದ್ದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಅನುಭಾವ ನೀಡಿದರು. ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಮ, ವೀರಣ್ಣ ಕಾರಬಾರಿ, ಹಂಸಕವಿ ಸೇರಿದಂತೆ ಹಲವರು ಇದ್ದರು. ದೀಪಕ ಠಮಕೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.