ಸನ್ನಡತೆಯೇ ಮನುಷ್ಯನ ನಿಜವಾದ ಸಂಪತ್ತು

ಭಾಲ್ಕಿ: ‘ಸನ್ನಡತೆಯೇ ಮನುಷ್ಯನ ನಿಜವಾದ ಸಂಪತ್ತು’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ಆಸ್ತಿ, ಅಂತಸ್ತು, ಅಧಿಕಾರಗಳು ಶಾಶ್ವತ ಅಲ್ಲ. ಜೀವನದ ಸಾರ್ಥಕತೆಗಾಗಿ ಮನುಷ್ಯ ಉತ್ತಮ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ,‘ಮನುಷ್ಯನ ನಡೆ-ನುಡಿ ಒಂದೇ ಆಗಿರಬೇಕು’ ಎಂದು ಹೇಳಿದರು.
ಮಾತಿನ ಮಹತ್ವ ಬಹಳ ಇದೆ. ಆದ್ದರಿಂದಲೇ ಶರಣರು ಮಾತನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ. ಪ್ರಜ್ಞಾ ಪೂರ್ವಕವಾಗಿ ಮಾತುಗಳನ್ನು ಆಡಬೇಕು. ಮಾತುಗಳು ಎದು ರಿನವರ ಮನಸ್ಸು ಅರಳಿಸುವಂತಿರಬೇಕು. ಬೇಸರ, ದುಃಖ ದೂರ ಮಾ ಡುವಂತಿರಬೇಕು. ಬೇರೆಯವರಿಗೆ ನೋವು ಉಂಟು ಮಾಡುವಂತೆ ಇರಬಾರದು ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.