ಭಾಲ್ಕಿ: ತಾಲ್ಲೂಕಿನ ಚಾಳಕಾಪೂರ ಗ್ರಾಮದಲ್ಲಿ ಮಂಗಳವಾರದಿಂದ (ಅ.21) ನಡೆಯಲಿರುವ ಮೂರು ದಿನಗಳ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಊರಲ್ಲಿ ಹಬ್ಬದ ಸಡಗರ ಮನೆಮಾಡಿದೆ.

ಹನುಮಾನ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿದು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ವಿವಿಧ ಬಣ್ಣಗಳ ವಿದ್ಯುತ್ ದೀಪಗಳ ಬೆಳಕಿನಲ್ಲಿ ದೇವಸ್ಥಾನವು ಹುಣ್ಣಿಮೆಯ ಚಂದ್ರನಂತೆ ಹೊಳೆಯುತ್ತಿದೆ. ದೇವಸ್ಥಾನದ ಈ ದೃಶ್ಯ ಭಕ್ತರಲ್ಲಿ ಹೃದಯಗಳಲ್ಲಿ ಹನುಮಾನ ದೇವರ ಕುರಿತಾದ ಭಕ್ತಿಯನ್ನು ಇಮ್ಮಡಿಗೊಳಿಸುತ್ತಿದೆ. ಜಾತ್ರೆಯ ಆರಂಭದ ದಿನವಾದ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅಭಿಷೇಕ ಹಾಗೂ ಅಲಂಕಾರ ಪೂಜೆ ಜರುಗಲಿದೆ.

ರಾತ್ರಿ 10.30 ರಿಂದ ಬೆಳಿಗ್ಗೆ 4ರ ವರೆಗೆ ಹನುಮಾನ ದೇವರ ಅಂಬಾರಿ ಉತ್ಸವ ಹಾಗೂ ವಿವಿಧ ಕಲಾ ತಂಡಗಳಿಂದ ಕಲೆಗಳ ಪ್ರದರ್ಶನ ನಡೆಯಲಿದೆ. ಬುಧವಾರ ಬೆಳಿಗ್ಗೆ 6ಕ್ಕೆ ಕಾಕಡಾರತಿ, ಮಧ್ಯಾಹ್ನ 12 ಗಂಟೆಗೆ ಅಲಂಕಾರ ಪೂಜೆ, ಸಂಜೆ 4.30 ಗಂಟೆಗೆ ಧ್ವಜಾರೋಹಣ, ನಂತರ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಜೀವಿನಿ ಪರ್ವತದವರೆಗೆ ನಡೆಯಲಿದೆ. ಗುರುವಾರ ಬೆಳಿಗ್ಗೆ 8ಕ್ಕೆ ಮಹಾದೇವ ಮಂದಿರದವರೆಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. 9.30 ಗಂಟೆಗೆ ಜಂಗಿ ಕುಸ್ತಿ ಜರುಗುವವು.

ದೇವಸ್ಥಾನದ ಹಿನ್ನೆಲೆ: ದ್ರೋಣಗಿರಿ ಪರ್ವತದಿಂದ ಆಂಜನೇಯ ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಗ್ರಾಮದ ದಕ್ಷಿಣ ಭಾಗದಲ್ಲಿ ಪರ್ವತದ ಒಂದು ಸಣ್ಣ ಕಲ್ಲು ಬಿದ್ದಿತ್ತು. ಅದೇ ಇಂದು ಸಂಜೀವಿನಿ ಪರ್ವತವಾಗಿ ಬೆಳೆದು ಪ್ರಸಿದ್ಧಿ ಪಡೆದಿದೆ ಎಂಬ ಪ್ರತೀತಿ ಇದೆ. ಈ ಸಂಜೀವಿನಿ ಬೆಟ್ಟದಲ್ಲಿ ರಾಮನ ಭಕ್ತಳಾದ ಚಾಳಕಾದೇವಿಯ ಭವ್ಯ ಮೂರ್ತಿ, ಶಿವಲಿಂಗ ಸ್ಥಾಪಿಸಲ್ಪಟ್ಟಿದೆ.

‘ಚಾಳಕಾದೇವಿ ಹೆಸರಿನ ಮೇಲೆ ಗ್ರಾಮಕ್ಕೆ ಚಾಳಕಾಪೂರ ಎಂಬ ಹೆಸರು ಬಂದಿದೆ. ಇಲ್ಲಿ ಆಂಜನೇಯ ಸ್ವಾಮಿ ಬಂದಿದ್ದ ಪಾದದ ಗುರುತು ಇವೆ’ ಎನ್ನುತ್ತಾರೆ ಹಿರಿಯರಾದ ಕಿಶೋರ ಕುಲಕರ್ಣಿ.

‘ಹನುಮಾನ ದೇವರ ದರ್ಶನ ಪಡೆಯಲು ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ ಮಹಾರಾಷ್ಟ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹರಕೆ ಹೊತ್ತು ದೇವಸ್ಥಾನದಲ್ಲಿ ತೆಂಗಿನ ಕಾಯಿ ಕಟ್ಟುತ್ತಾರೆ. ಹರಕೆ ಈಡೇರಿದ ನಂತರ ತೆಂಗಿನ ಕಾಯಿ ತೆಗೆದುಕೊಂಡು ಹೋಗುತ್ತಾರೆ. ದೀಪಾವಳಿ ಮತ್ತು ದವನದ ಹುಣ್ಣಿಮೆ (ಹನುಮಾನ ಜಯಂತಿ) ಒಳಗೊಂಡು ವರ್ಷದಲ್ಲಿ ಎರಡು ಸಾರಿ ಜಾತ್ರೆ ನಡೆಯುತ್ತದೆ’ ಎಂದು ಗ್ರಾಮಸ್ಥ ಸುಭಾಷ ಕೆನಡೆ ತಿಳಿಸಿದರು.

‘ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಕಲ ರೀತಿಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಜಾತ್ರೆಯ ಯಶಸ್ಸಿಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ದೇವಸ್ಥಾನದ ಪೂಜಾರಿ ತಿಳಿಸಿದರು.

ಹನುಮಾನ ದೇವರ ಜಾತ್ರೆ ನಿಮಿತ್ತ ಗ್ರಾಮದ ಎಲ್ಲ ಮನೆಗಳು ನೆಂಟರಿಷ್ಟರಿಂದ ತುಂಬಿದ್ದು ಜಾತ್ರೆಯ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಗ್ರಾಮಸ್ಥರು ಕಾತರರಾಗಿದ್ದಾರೆ
ಸುಭಾಷ ಕೆನಡೆ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.