ಹಾರಕೂಡ (ಬಸವಕಲ್ಯಾಣ): ತಾಲ್ಲೂಕಿನ ಹಾರಕೂಡದಲ್ಲಿ ಚಂದಾಪುರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಸೇವಾ ಸಂಘದಿಂದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರಿಗೆ ‘ಸಂಗೀತ ಸಾಹಿತ್ಯ ಪೋಷಕ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸಾಹಿತಿ ಬಸವರಾಜ ಐನೋಳಿ ಅವರ ‘ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠ’ ಗ್ರಂಥ ಬಿಡುಗಡೆ ಮಾಡಲಾಯಿತು.

ನಂತರ ಉಪನ್ಯಾಸಕ ರಾಮಚಂದ್ರ ಗಣಾಪುರ ಮಾತನಾಡಿ,‘ಹಾರಕೂಡ ಮಠದ ಶ್ರೀಗಳು ಧರ್ಮಕಾರ್ಯಗಳ ಜತೆಗೆ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಸುಂದರವಾದ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಈ ಮಠದ ಪಾತ್ರ ಬಹಳಷ್ಟಿದೆ’ ಎಂದರು.

ಚಿಂಚೋಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ್ ಮಾತನಾಡಿ, ‘ಈ ಭಾಗವು ಜನಪದ ಹಾಗೂ ವಚನ ಸಾಹಿತ್ಯದ ತವರುಮನೆಯಾಗಿದೆ. ರೇವಣಸಿದ್ದಯ್ಯ ಹಿರೇಮಠ ಪ್ರಖ್ಯಾತ ಸಂಗೀತ ಕಲಾವಿದರಾಗಿದ್ದು, ಅವರ ಬಗ್ಗೆ ಬಸವರಾಜ ಐನೋಳಿ ಅವರು ಗ್ರಂಥ ರಚಿಸಿರುವುದು ಸ್ತುತ್ಯಕಾರ್ಯವಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಅಶೋಕ ಪಾಟೀಲ, ಬಸವರಾಜ ಯರಬಾಗ, ಮಲ್ಲಿನಾಥ ಹಿರೇಮಠ, ರಾಜಕುಮಾರ ಶಿರಗಾಪುರ, ವಿಠಲ್ ಹೂಗಾರ ಹಾಗೂ ಅಪ್ಪಣ್ಣ ಜನವಾಡಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.