ಚಿಟಗುಪ್ಪ: ಪಟ್ಟಣದ, ಸುತ್ತಲಿನ ಗ್ರಾಮಗಳಲ್ಲಿ ಆರು ದಿನಗಳಿಂದ ಜಡಿಮಳೆ ಸುರಿಯುತ್ತಿದ್ದು, ಬುಧವಾರದ ವರೆಗೆ ತಾಲ್ಲೂಕಿನ ಒಟ್ಟು 9 ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿದ ಘಟನೆ ವರದಿಯಾಗಿದೆ.

ನಿರ್ಣಾ ಹೋಬಳಿಯಲ್ಲಿ ಭಾದ್ರಾಪುರ ಗ್ರಾಮದ ವಿನೋದ್ ನೀಲಕಂಠ, ಪತ್ತು ರತ್ನು, ನಿರ್ಣಾದ ಬಕ್ಕಾರೆಡ್ಡಿ ಹಣಮಂತ ರಡ್ಡಿ, ಉಡಬಾಳ ಗ್ರಾಮದ ಮಹಾರುದ್ರಪ್ಪ ಮಾಣಿಕಪ್ಪ, ಮಂಗಲಗಿ ಗ್ರಾಮದ ಕಮಲರಡ್ಡಿ ವೀರಾರಡ್ಡಿ, ರೇಖಾ ಪ್ರಭು, ಬೇಮಳಖೇಡಾ ಹೋಬಳಿಯ ಚೌಕಿ ತಾಂಡದ ಜಮುನಾ ಬಾಯಿ ಭೀಮು, ಮನ್ನಾಎಖ್ಖೇಳಿ ಗ್ರಾಮದ ಗುಂಡಮ್ಮ ಘಾಳೆಪ್ಪ ಹಾಗೂ ಚಿಟಗುಪ್ಪ ಹೋಬಳಿಯ ಹಿಪ್ಪರಗಾ ಗ್ರಾಮದಲ್ಲಿ ಒಂದು ಸೇರಿ ಒಟ್ಟು 9 ಮನೆಗಳ ಗೋಡೆ ಕುಸಿದಿದ್ದು, ಸ್ಥಳಕ್ಕೆ ತಹಶೀಲ್ದಾರ್ ಜಿಯಾವುಲ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುವಾರ ರಾತ್ರಿ-ಹಗಲು ಜಿಟಿಜಿಟಿ ಮಳೆ ಸುರಿದಿದ್ದು, ನಾಗರಿಕರು ಮನೆಗಳಿಂದ ಹೊರಗೆ ಬರಲು ಪ್ರಯಾಸ ಪಡುವಂತಾಯಿತು.

ರೈತರು ಹೊಲಗಳಲ್ಲಿ ಬೆಳೆಯ ಮಧ್ಯದ ಕಳೆ ತೆಗೆಯಲು ಸಿಂಪರಣೆ ಮಾಡಿದ ಕ್ರಿಮಿನಾಶಕ ಮಳೆಯ ನೀರಿಗೆ ತೊಳೆದುಕೊಂಡು ಹೋಗಿದ್ದು ಅಪಾರ ನಷ್ಟವಾಗಿದೆ ಎಂದು ತಿಳಿಸಿದರು.

ಹೊಲ ಗದ್ದೆಗಳಲ್ಲಿ ಎಲ್ಲೆಂದರಲ್ಲಿ ನೀರು ಹರಿಯುತ್ತಿದ್ದು, ಬಹುತೇಕ ರೈತರ ಹೊಲದಲ್ಲಿಯ ಮಣ್ಣು ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿ ಹಾನಿ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.