ಹುಮನಾಬಾದ್: ‘ಹಿಂದೂ ಸಮಾಜ ಜಾತಿ, ಮತ, ಪಂಗಡ, ಪಕ್ಷ, ಪ್ರಾಂತೀಯತೆ, ಭಾಷಾ ಭೇದಗಳು ಬದಿಗಿಟ್ಟು ಸಂಘಟಿತರಾದಾಗ ಮಾತ್ರ ಸಶಕ್ತ ಮತ್ತು ಸಮೃದ್ಧ ಭಾರತ ನಿರ್ಮಾಣ ಸಾಧ್ಯ’ ಎಂದು ವಿಶ್ವ ಹಿಂದು ಪರಿಷತ್ (ವಿಎಚ್ಪಿ) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಮಾಣಿಕನಗರದ ಮಾಣಿಕ ಸೌಧದಲ್ಲಿ ನಡೆದ ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ ಸಮಾಜ ಸಂಘಟಿತವಾದರೆ ಯಾವುದೇ ಬಾಹ್ಯ ಶಕ್ತಿಗಳು ನಮ್ಮ ದೇಶದ ಪ್ರಗತಿಗೆ ಅಡ್ಡಿಯಾಗಲು ಸಾಧ್ಯವಿಲ್ಲ. ಹಿಂದೂ ಸಂಸ್ಕೃತಿ ಎಲ್ಲರನ್ನೂ ಹಾಗೂ ಎಲ್ಲವನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ. ದೇಶದ ಭದ್ರತೆ, ಸುರಕ್ಷತೆ, ಆರ್ಥಿಕ ಸಬಲೀಕರಣ, ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಗಾಗಿ ಸಮಾಜದ ಏಕತೆಯೇ ಪ್ರಮುಖ ಅಸ್ತ್ರವಾಗಿದೆ. ಹಿಂದೂ ಸಮಾಜದ ಸಂಘಟನೆ ಬಲಪಡಿಸುವುದು, ಹಿಂದೂ ಸಮಾಜದ ಹಿತ ಕಾಪಾಡುವುದು, ರಾಷ್ಟ್ರಪರ ಚಟುವಟಿಕೆ ನಿರಂತರ ನಡೆಸಲು ಪರಿಷತ್ ಕೆಲಸ ಮಾಡುತ್ತಿದೆ. ಯುವಕರು ಸಮಾಜ ಸೇವೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮುಂದಾಳತ್ವ ವಹಿಸಲು ಇದು ಸಕಾಲವಾಗಿದೆ. ಸಂಘಟಿತ ಹಿಂದೂ ಸಮಾಜವೇ ವಿಶ್ವ ಗುರು ಭಾರತದ ಕನಸು ನನಸು ಮಾಡಲು ಸಾಧ್ಯ’ ಎಂದರು.

ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಮಾತನಾಡಿ, ‘ನಮ್ಮ ಸಂಸ್ಕೃತಿ, ಪರಂಪರೆಗೆ ಕುತ್ತು ತರುವ ಮೂಲಕ ಸಮಾಜದ ವಿಘಟನೆಗೆ ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮ ವಿರೋಧಿಗಳು ಅಪಪ್ರಚಾರ ಮಾಡಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಜ ಎಚ್ಚರ ವಹಿಸುವ ಅಗತ್ಯವಿದೆ. ನಮ್ಮ ವಿಚಾರ, ಚಿಂತನೆ, ಕೆಲಸ ಕಾರ್ಯಗಳು ರಾಷ್ಟ್ರ, ಧರ್ಮದ ಪರವಾಗಿ ಇರಬೇಕು. ಈ ನಿಟ್ಟಿನಲ್ಲಿ ಪರಿಷತ್ ಅನೇಕ ಕಾರ್ಯಗಳನ್ನು ಮಾಡುತ್ತಿದೆ’ ಎಂದು ಹೇಳಿದರು.

ಘನಲಿಂಗ ಶಿವಾಚಾರ್ಯರು ಮಾತನಾಡಿ, ‘ಹಿಂದುತ್ವ ಉಳಿಸಿ, ಬೆಳೆಸುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಂಘಟಿತ ಹಿಂದೂ ಸಮಾಜದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಶ್ರಮಿಸುತ್ತಿದೆ. ಸಮಾಜದ ಪ್ರತಿಯೊಬ್ಬರೂ ಪರಿಷತ್ ಕಾರ್ಯಕ್ಕೆ ಕೈಜೋಡಿಸಿ ಬೆನ್ನೆಲುಬಾಗಿ ನಿಲ್ಲುವ ಅಗತ್ಯವಿದೆ’ ಎಂದರು.

ಈ ಸಂದರ್ಭದಲ್ಲಿ ವಿಎಚ್ಪಿ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ಕೇಂದ್ರೀಯ ಸಹ ಕಾರ್ಯದರ್ಶಿ ಕೇಶವರಾಜು, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಸುನೀಲ ಭೈರವಾಡಗಿ, ಸತೀಶ ನೌಬಾದೆ, ರಮೇಶ ಕುಲಕರ್ಣಿ, ಭೀಮಣ್ಣಾ ಸೋರಳ್ಳಿ ಆಣದೂರ, ಬಸವರಾಜ್ ಯದಲಾಪುರೆ, ವಿಎಚ್ಪಿ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.