ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರ ಮನೆಯಲ್ಲಿ ಹೋಮ ಹವನ ದುರದೃಷ್ಟಕರ: ನಿಜಗುಣಾನಂದ ಸ್ವಾಮೀಜಿ

Published 27 ನವೆಂಬರ್ 2023, 14:55 IST
Last Updated 27 ನವೆಂಬರ್ 2023, 14:55 IST
ಅಕ್ಷರ ಗಾತ್ರ

ಬೀದರ್‌: ‘ಲಿಂಗಾಯತರ ಮನೆಯಲ್ಲಿ ಹೋಮ ಹವನ ಮಾಡುತ್ತಿರುವುದು ದುರದೃಷ್ಟಕರ’ ಎಂದು ಬೈಲೂರು ನಿಷ್ಕಲ ಮಂಟಪ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ವಚನ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭ ಹಾಗೂ ಸಂವಿಧಾನ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೈಚಾರಿಕತೆಯ ನೆಲೆಗಟ್ಟಿಗೆ ಕಷ್ಟ ಸಹಜ. ಲಿಂಗಾರಾಧನೆ, ಜಂಗಮರಾಧನೆ ಅಳವಡಿಸಿಕೊಳ್ಳುವಲ್ಲಿ ಹೊಂದಾಣಿಕೆ ಬೇಡ. ನಮಗೆ ಬಸವ ತತ್ವ ಮುಖ್ಯ. ಅದು ಮನೆ ಮನೆಗೂ, ಮನ ಮನಕ್ಕೂ ಮುಟ್ಟಿಸುವ ಜವಾಬ್ದಾರಿ ಎಲ್ಲರದಾಗಬೇಕು. 12ನೇ ಶತಮಾನದಲ್ಲಿ ಎಲ್ಲಾ ಶರಣರು ಒಂದೆಡೆ ಸೇರಿ ಚಿಂತನೆ ಮಾಡಿದಂತೆ ನಾವೆಲ್ಲರೂ ಒಟ್ಟುಗೂಡಿ ಒಂದೇ ಭಾವದಿಂದ ಬಸವ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು ಎಂದರು.

ಇಂದು ಎಲ್ಲೆಡೆ ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರ ತಾಂಡವವಾಡುತ್ತಿದೆ. ಇಂಥ ಸಂದರ್ಭದಲ್ಲಿ ಬದುಕುವ ಬಯಕೆ ನೈಜತೆಯಿಂದ ಕೂಡಿರಬೇಕು ಎಂದು ಹೇಳಿದರು.

ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್. ಮಠಪತಿ ಅವರು ಸಂವಿಧಾನದ ಪೀಠಿಕೆ ಓದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೊಂದು ವೈಚಾರಿಕತೆ, ತಾತ್ವಿಕ ನೆಲೆಗಟ್ಟಿನ ಕಾರ್ಯಕ್ರಮ. ಇಂದು ವಚನಗಳಿಗೆ ಮೌಲ್ಯ ಬರಬೇಕಾದರೆ ಅವುಗಳು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳು, ಸಂವಿಧಾನ ಒಂದಕ್ಕೊಂದು ಪೂರಕವಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಲ್ದಾಳ ಸಿದ್ದರಾಮ ಶರಣರು ಮಾತನಾಡಿ,‘ಸತ್ಯ ಹೇಳುವವರಿಗೆ ಇದು ಸಂಕಷ್ಟದ ಕಾಲ. ಸುಳ್ಳು ಎದ್ದು ಕುಣಿಯುತ್ತಿದೆ. ಆದರೆ, ನಮ್ಮ ನಿಲುವು, ನಿಷ್ಠುರತೆ ಬಿಡಬಾರದು’ ಎಂದು ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಜಿಲ್ಲಾ ಮಾದಿಗರ ನೌಕರರ ಸಂಘದ ಅಧ್ಯಕ್ಷ ಸುಮಂತ ಕಟ್ಟಿಮನಿ, ಬಸವಕಲ್ಯಾಣ ಹರಳಯ್ಯ ಪೀಠದ ಗಂಗಾಂಬಿಕೆ ಅಕ್ಕ, ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಮುಖಂಡರಾದ ಬಿ.ಜಿ. ಶೆಟಕಾರ, ಬಾಬು‌ವಾಲಿ ಗುರುನಾಥ ಕೊಳ್ಳೂರ, ಸೋಮಶೇಖರ ಪಾಟೀಲ ಗಾದಗಿ, ಬಸವಕುಮಾರ ಪಾಟೀಲ, ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ, ಟ್ರಸ್ಟ್‌ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನವಾದಗೇರೆ ಹಾಗೂ ನಿರ್ದೇಶಕ ಶಿವಶಂಕರ ಟೋಕರೆ  ಇದ್ದರು.

ಇದೇ ವೇಳೆ ಕೂಲಿ ಕಾರ್ಮಿಕರಿಗೆ ಹೊದಿಕೆಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT