ರಾಜ್ಯ ಸರ್ಕಾರ ಸಕಾಲದಲ್ಲಿ ಬಿಲ್ ಪಾವತಿ ಮಾಡಿದರೂ ಗುತ್ತಿಗೆದಾರ ಕೆಲಸ ಮಾಡದಿರುವುದು ಹಾಗೂ ನೀರಾವರಿ ಇಲಾಖೆ ನಿವೃತ್ತ ಎಂ.ಡಿ ಮಲ್ಲಿಕಾರ್ಜುನ ಗುಂಗೆ ಅವರೇ ನೇರ ಕಾರಣ. ಅವರ ಈ ನಿರ್ಲಕ್ಷ್ಯಕ್ಕೆ ಇನ್ನೂ ಏಂಥ ಉದಾಹರಣೆ ಬೇಕು
–ಶರಣು ಸಲಗರ, ಶಾಸಕ
ಬರ ಬಿದ್ದಾಗ ಕೆರೆಯಲ್ಲಿ ನೀರಿದ್ದರೆ ಕೊಳವೆ ಭಾವಿಗಳಿಗೆ ಹೆಚ್ಚಿನ ನೀರು ಬಂದು ಜನ–ಜಾನುವಾರುಗಳ ಬದುಕಿಗೆ ಆಸರೆಯಾಗುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬರುವ ಚಳಿಗಾಲ ಅಧಿವೇಶನದಲ್ಲಿ ಸ್ಥಳೀಯ ಶಾಸಕರು ಧ್ವನಿ ಎತ್ತಬೇಕು. ಶೀಘ್ರ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು
–ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷರು ರಾಜ್ಯ ರೈತ ಸಂಘ ಬೀದರ್
ಕೊಂಗಳಿ ಏತನೀರಾವರಿ ಯೋಜನೆ ಅಂತಿಮ ಹಂತದಲ್ಲಿದೆ. ಈಗಾಗಲೇ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಗೋವರ್ಧನ ತಾಂಡಾ ಬಳಿ ಜಾಕ್‌ವೆಲ್ ನಿರ್ಮಿಸಿ ಮೋಟರ್ ಅಳವಡಿಸಲಾಗಿದ್ದು ನೀರಾವರಿ ಸೌಲಭ್ಯ ದೊರೆಯಲಿದೆ.