ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ರಾಜಕಾರಣಿ ಅಲ್ಲ; ಸೇವಕ’

ಹುಲಸೂರ ಜಿ.ಪಂ ಕ್ಷೇತ್ರದ ಗ್ರಾಮಗಳಲ್ಲಿ ಮತಯಾಚಿಸಿದ ಶರಣು ಸಲಗರ
Last Updated 8 ಏಪ್ರಿಲ್ 2021, 2:51 IST
ಅಕ್ಷರ ಗಾತ್ರ

ಹುಲಸೂರ: ‘ನಾನು ರಾಜಕಾರಣಿ ಅಲ್ಲ; ನಿಮ್ಮ ಸೇವಕ. ನಿಮ್ಮ ಮನೆಯ ಮಗ, ಸಹೋದರನೆಂದು ತಿಳಿದು ಕ್ಷೇತ್ರಾಭಿವೃದ್ಧಿಗಾಗಿ ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮತಯಾಚಿಸಿದರು.

ಹುಲಸೂರ ಬಿಜೆಪಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಆನಂದವಾಡಿ, ಕೋಟಮಾಳ, ಮಿರಕಲ್, ಗುತ್ತಿ, ವಾಂಜರವಾಡಿ, ಹಣಮಂತವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಲಾಕ್‍ಡೌನ್ ದಿನಗಳ ಕಾಲಾವಧಿಯಲ್ಲಿ ಕ್ಷೇತ್ರದ ಬಡ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿರುವೆ. ಇದನ್ನು ಮನಸಾರೆ ಮೆಚ್ಚಿಕೊಂಡಿರುವ ನನ್ನ ಜನರು, ತಮ್ಮ ಸೇವಕನನ್ನಾಗಿ ಚುನಾಯಿಸುವರು ಎಂಬ ಭರವಸೆ ನನಗಿದೆ’ ಎಂದರು.

ಮಿರಕಲ್ ಗ್ರಾಮದಲ್ಲಿ ಜನರು ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಮಾಡಿ ಶರಣು ಸಲಗರ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ ಬಿರಾದಾರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲತಾ ಎಸ್.ಹರಕೂಡೆ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಹುಲಸೂರ ಬಿಜೆಪಿ ಮಹಾಶಕ್ತಿ ಕೆಂದ್ರದ ಅಧ್ಯಕ್ಷ ಅರವಿಂದ ಹರಪಲ್ಲೆ, ಕೋಶಾಧ್ಯಕ್ಷ ದೇವಿಂದ್ರ ಭೋಪಳೆ, ಸಂಗಮೇಶ ಭೋಪಳೆ, ಚಂದ್ರಕಾಂತ್ ದೇಟ್ನೆ, ಜ್ಞಾನೋಬಾ ನಿಟ್ಟೂರೆ, ಶರದ್ ಶಿಂದೆ, ಜಗನ್ನಾಥ ದೇಟ್ನೆ ಪ್ರಚಾರ ಸಭೆಯ ನೇತೃತ್ವ ವಹಿಸಿಕೊಂಡಿದ್ದರು.

ಆನಂದವಾಡಿಯಲ್ಲಿ ರಾಜಕುಮಾರ ಹಲಿಂಗೆ, ಶಾಂತಕುಮಾರ, ಮಚೇಂದ್ರನಾಥ, ಓಂಕಾರ್, ಸುಭಾಷ್ ಕಾಡಾದಿ, ಶಿವಾಜಿ ಪಾಟೀಲ, ಕೋಟಮಾಳ ಗ್ರಾಮದಲ್ಲಿ ಗುಂಡುರಾವ ಭೋಸರೆ, ಮಾಧವ ಕಾಮಕಾರ, ರಾಮ ಶಿಂದೆ, ಅಹಮ್ಮದ್ ಮುಲ್ಲಾ, ವಿಠ್ಠಲ್‍ರೆಡ್ಡಿ, ಮಹಾದೇವ ಎಮಲೆ, ಮಹಾದೇವ ತೂರಸಲೆ, ತಾನಾಜಿ ತೂರಸಲೆ, ತುಕಾರಾಮ ಜಾಧವ, ವೈಭವ ಬಿರಾದಾರ, ಮಾರುತಿ ಗಾಯಕ ವಾಡ, ಜ್ಞಾನೇಶ್ವರ ಪಂಚಾಳ, ಬಾಲಾಜಿ ಬಿರಾದಾರ, ಸಾಗರ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT