ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿ ಕವಿ, ಲೇಖಕರ ಸಂಘ ಉದ್ಘಾಟನೆ

Last Updated 2 ಜುಲೈ 2021, 4:39 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮರಾಠಿ ಕವಿ, ಲೇಖಕರ ಸಂಘಟನೆಯ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಬುಧವಾರ ಇಲ್ಲಿ ಆಯೋಜಿಸಲಾಗಿತ್ತು.

ಹಿರಿಯ ಕವಿ ಅನಂತ ಕದಮ ಹೊಳಸಮುದ್ರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಸಾಹಿತ್ಯದಿಂದ ಸಮಾಜ ಜಾಗೃತಿ ಸಾಧ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದುವಂಥ ಕಾವ್ಯವನ್ನು ಉದಯೋನ್ಮುಖರು ರಚಿಸಬೇಕು’ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಮಾತನಾಡಿ, ‘ಸಾಹಿತ್ಯಾಸಕ್ತಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಸಂಘಟನೆ ಆರಂಭಿಸಲಾಗುತ್ತಿದೆ’ ಎಂದರು.

ಮೋಹನ ಕೋರೆ, ಗೋವಿಂದರಾವ್ ಚಿಟ್ಟಮಪಲ್ಲೆ, ಉದ್ಧವರಾವ್ ಹಲಸೆ, ಭಾವುರಾವ್ ಪಾಟೀಲ ಘಾಟಬೋರಾಳ, ಅನಿತಾ ಸಾವಳಕರ್, ಗಂಗಾರಾಮ ಜೋಗೆವಾಡಿ, ಅಷ್ಟಮಿ ಕಾಂಬಳೆ, ಶೀಲಾ ಪಾಟೀಲ ಮಾತನಾಡಿದರು.

15 ಜನರು ಕವನ ವಾಚಿಸಿದರು. ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಭಾನುದಾಸ ಪಾಟೀಲ ಅವರು ಶಿಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಕಾರಣ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಘಟಕದ ಖಜಾಂಚಿ ಅಮೃತ ಆಕರೆ, ಲಕ್ಷ್ಮಿಬಾಯಿ ಪಾಟೀಲ, ದಮಯಂತಿ ಮೈಸೆ ಉಪಸ್ಥಿತರಿದ್ದರು. ಬಾಲಾಜಿ ಜಾಧವ ನಿರೂಪಿಸಿದರು. ಬಜರಂಗ ಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT