ಗುರುವಾರ , ಜೂನ್ 17, 2021
22 °C
ಕೂಲಿಕಾರ್ಮಿಕರು, ವಲಸಿಗರು, ದುರ್ಬಲ ವರ್ಗದವರಿಗೆ ಉಚಿತ ಆಹಾರ

ಇಂದಿರಾ ಕ್ಯಾಂಟೀನ್ ಊಟ ಸವಿದ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಶಾಸಕ ಶರಣು ಸಲಗರ ಅವರು ಬುಧವಾರ ನಗರದ ನಾರಾಯಣಪುರ ರಸ್ತೆಯಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸವಿದರು.

ಸರ್ಕಾರ ಲಾಕ್‌ಡೌನ್‌ ಇರುವ ಕಾರಣ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡಲಾಗುವುದು ಎಂದು ಪ್ರಕಟಿಸಿದ ಕಾರಣ ಶಾಸಕರು ಊಟ ಬಡಿಸಿ ಉಚಿತ ವ್ಯವಸ್ಥೆಗೆ ಚಾಲನೆ ನೀಡಿ ತಾವೂ ಊಟ ಮಾಡಿದರು.

ಬೆಳಿಗ್ಗೆಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲಾಗುತ್ತದೆ. ಕೂಲಿ ಕಾರ್ಮಿಕರು, ವಲಸಿಗರು ಹಾಗೂ ದುರ್ಬಲ ವರ್ಗದವರು ಇದರ ಲಾಭ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ನಾಹೀದಾ ಸುಲ್ತಾನಾ, ಪೌರಾಯುಕ್ತ ಗೌತಮಬುದ್ಧ ಕಾಂಬಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಉಪಸ್ಥಿತರಿದ್ದರು.

1700 ಜನರಿಗೆ ಊಟ

ಬೀದರ್: ನಗರದಲ್ಲಿ ಮೂರು ಇಂದಿರಾ ಕ್ಯಾಂಟೀನ್‌ಗಳಿವೆ.

‘ನಗರಸಭೆ ಕಚೇರಿ, ಜಿಲ್ಲಾ ಆಸ್ಪತ್ರೆ ಮತ್ತು ಗಾಂಧಿ ಗಂಜ್‌ ಬಳಿಯಿರುವ ಇಂದಿರಾ ಕ್ಯಾಂಟೀನ್‌ಗಳಿಂದ ಮಂಗಳವಾರ ಒಟ್ಟು 800 ಮತ್ತು ಬುಧವಾರ ಒಟ್ಟು 900 ಮಂದಿಗೆ ಉಚಿತ ಉಪಾಹಾರ ಮತ್ತು ಊಟ ನೀಡಲಾಯಿತು’ ಎಂದು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಜಟಿಂಗ್ ಮಾಹಿತಿ ನೀಡಿದ್ದಾರೆ.

1300 ಜನರಿಗೆ ಆಹಾರ

ಭಾಲ್ಕಿ: ‘ಇಲ್ಲಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಮಂಗಳವಾರ ಉಪಾಹಾರ, ಊಟ ಸೇರಿ ಸುಮಾರು 700 ಜನರಿಗೆ ಹಾಗೂ ಬುಧವಾರ 600 ಜನರಿಗೆ ಉಚಿತವಾಗಿ ನೀಡಲಾಗಿದೆ’ ಎಂದು ಕ್ಯಾಂಟೀನ್‌ ಮೇಲ್ವಿಚಾರಕ ಬಿಂದುಸಾರ ಶಿವಪೂರೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು