ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ | ಆಯುಕ್ತರಿಂದ ಮತಗಟ್ಟೆಗಳ ಪರಿಶೀಲನೆ

Published 6 ಏಪ್ರಿಲ್ 2024, 16:28 IST
Last Updated 6 ಏಪ್ರಿಲ್ 2024, 16:28 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಶನಿವಾರ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ವಿವಿಧ ಮತಗಟ್ಟೆಗಳ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ‘ಮತದಾರರಿಗೆ ಸರದಿ ಸಾಲಿನಲ್ಲಿ ನಿಂತಾಗ ನೆರಳು ಇರುವಂತೆ ಶಾಮಿಯಾನ, ಕುಡಿಯುವ ನೀರು, ಮತಗಟ್ಟೆ ಆವರಣದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಅಂಗವಿಕಲರಿಗೆ ಚಕ್ರದ ಖುರ್ಚಿ ಮತಗಟ್ಟೆಯಲ್ಲಿ ಲಭ್ಯವಿರಬೇಕು’ ಎಂದು ಸೂಚಿಸಿದರು.

ಬಿಎಲ್‌ಒಗಳಾದ ಶಂಕರ್, ಶಿವಕುಮಾರ್, ನಾಗಶೆಟ್ಟಿ, ಕಲ್ಲಪ್ಪ ಅವರು ಮತಗಟ್ಟೆಗಳ ಹಾಗೂ ಮತದಾರರ ಬಗ್ಗೆ ಸಂಖ್ಯೆವಾರು ಮಾಹಿತಿಯನ್ನು ಅಧಿಕಾರಿಗೆ ನೀಡಿದರು ಹಾಗೂ ಇದುವರೆಗೂ ಕೈಗೊಂಡ ವ್ಯವಸ್ಥೆ ಕುರಿತು ವಿವರಿಸಿದರು.

ತಹಶೀಲ್ದಾರ್‌ ರವೀಂದ್ರ ದಾಮಾ, ಕಂದಾಯ ನಿರೀಕ್ಷಕ ಮಹೇಶ್‌ಕುಮಾರ್, ಗ್ರಾಮ ಲೆಕ್ಕಿಗ ವಿಠಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪಂಚಾಯಿತಿ, ಕಂದಾಯ ಇಲಾಖೆಗಳ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT