ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಉತ್ಸವ: ದೊಣ್ಣೆ ವರಸೆ, ಜಂಪ್ ರೋಪ್ ಸ್ಪರ್ಧೆ

Last Updated 5 ಜನವರಿ 2023, 10:45 IST
ಅಕ್ಷರ ಗಾತ್ರ

ಬೀದರ್: ಬೀದರ್ ಉತ್ಸವದ ಅಂಗವಾಗಿ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ದೊಣ್ಣೆ ವರಸೆ ಹಾಗೂ ಜಂಪ್ ರೋಪ್ ಸ್ಪರ್ಧೆಗಳು ನಡೆದವು.


ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.


ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಸ್ಪರ್ಧೆಗೆ ಚಾಲನೆ ನೀಡಿದರು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಪದವಿಪೂರ್ವ ಶಿಕ್ಷಣ ಇಲಾಖೆಯ ದೈಹಿಕ ನಿರ್ದೇಶಕ ನಾಗನಾಥ ಬಿರಾದಾರ ಮುಖ್ಯ ಅತಿಥಿಯಾಗಿದ್ದರು.


ದೊಣ್ಣೆ ವರಸೆ ಸ್ಪರ್ಧೆ ಉಸ್ತುವಾರಿ ಸಂಜುಕುಮಾರ ಬಾಪುರ, ಜಂಪ್ ರೋಪ್(ಹಗ್ಗದಾಟ) ಸ್ಪರ್ಧೆ ಉಸ್ತುವಾರಿ ಅಂಬಾದಾಸ್, ತಾಲ್ಲೂಕು ದೈಹಿಕ ನಿರ್ದೇಶಕ ಎ.ಕೆ. ಜೋಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಥ್ಲೆಟಿಕ್ ತರಬೇತುದಾರ ಮೌಲಪ್ಪ ಮಾಳಗೆ, ಜಿಮ್ ತರಬೇತುದಾರ ಅಜಯ್, ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಸುವಿತ್ ಮೋರೆ, ನಾಗೇಶ, ಶಿವರಾಜ ಸಿಂಗ್, ಇರ್ಫಾನ್, ಕೇದಾರನಾಥ, ಸುದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT