ಭಾನುವಾರ, ಏಪ್ರಿಲ್ 2, 2023
31 °C

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿನ ಎಲ್ಲ ಪ್ರಕಾರದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.

ಕಲಬುರ್ಗಿಯಲ್ಲಿ ಏಳು ಜಿಲ್ಲೆಗಳ ಕಲಾವಿದರು ಮತ್ತು ಸಂಘಟಕರು ಸಭೆ ಸೇರಿ ಒಕ್ಕೂಟ ರಚಿಸಿ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.

ನೂತನ ಪದಾದಾಧಿಕಾರಿಗಳು: ಮಂಜಮ್ಮ ಜೋಗತಿ (ಗೌರವಾಧ್ಯಕ್ಷ), ವಿಜಯಕುಮಾರ ಸೋನಾರೆ ಬೀದರ್ (ಅಧ್ಯಕ್ಷ), ಪ್ರಕಾಶ ಅಂಗಡಿ ಯಾದಗಿರಿ(ಪ್ರಧಾನ ಕಾರ್ಯದರ್ಶಿ), ಎಸ್.ಬಿ. ಹರಿಕೃಷ್ಣ ಕಲಬುರಗಿ (ಕೋಶಾಧ್ಯಕ್ಷ), ಡಿಂಗ್ರಿ ನರೇಶ ರಾಯಚೂರು, ಸುಜಾತಾ ಜಂಗಮಶೆಟ್ಟಿ ಕಲಬುರಗಿ, ಶರಣಪ್ಪ ವಡಿಗೇರಾ ಕೊಪ್ಪಳ, ಪುರುಷೋತ್ತಮ .ಜಿ ಬಳ್ಳಾರಿ (ಉಪಾಧ್ಯಕ್ಷರು), ರೇಖಾ ಅಪ್ಪಾರಾವ್ ಸೌದಿ ಬೀದ‌ರ್, ನಾಗಯ್ಯ ಸ್ವಾಮಿ ಚಿತ್ತಾಪೂರ, ಅಂಬ್ರೇಶ ಹಸಮಕಲ್ ರಾಯಚೂರು, ವಿಶ್ವನಾಥ ತೊಟ್ನಳ್ಳಿ ಕಲಬುರಗಿ (ಸಹಕಾರ್ಯದರ್ಶಿಗಳು),
ಲಲಿತಾ ಪವಾರ ಬೀದರ್, ಸುನೀಲ್ ಕಡ್ಡೆ ಬೀದರ್, ಶಿವಪ್ಪ ಹೆಬ್ಬಾಳ ಯಾದಗಿರಿ, ಬಸವರಾಜ ಬಲಕುಂದಿ ಶಿರಗುಪ್ಪ, ಜೀವನಸಾಬ ಬಿನ್ನಾಳ ಕೊಪ್ಪಳ (ಕಾರ್ಯಾಕಾರಿ ಸಮಿತಿಯ ಸದಸ್ಯರು) ಒಟ್ಟು 17 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಬರುವದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನಪದ, ರಂಗಭೂಮಿ, ಬಯಲಾಟ, ಸಂಗೀತ, ನೃತ್ಯ, ಆದಿವಾಸಿ, ಕಲಾವಿದರನ್ನು ಒಳಗೊಂಡಂತೆ ಎಲ್ಲ ಪ್ರಕಾರದ ಕಲಾವಿದರನ್ನು ಗುರುತಿಸಲಾಗುವುದು. ಅರ್ಹ ಕಲಾವಿದರಿಗೆ ಸರ್ಕಾರದ ಯೋಜನೆ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಒಕ್ಕೂಟದ ಪ್ರಕಟಣೆ ತಿಳಿಸಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು