ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ಖೇಣಿ ₹ 188.94 ಕೋಟಿ ಮೌಲ್ಯದ ಆಸ್ತಿಯ ಒಡೆಯ

Last Updated 20 ಏಪ್ರಿಲ್ 2023, 14:45 IST
ಅಕ್ಷರ ಗಾತ್ರ

ಬೀದರ್‌: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬೀದರ್ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮಾಜಿ ಶಾಸಕ ಅಶೋಕ ಖೇಣಿ ₹ 1,01,27,73,959 ಚರಾಸ್ತಿ ಹಾಗೂ ₹ 87,66,69,682 ಸ್ಥಿರಾಸ್ತಿ ಸೇರಿ ಒಟ್ಟು ₹ 188,94,43,641 ಮೌಲ್ಯದ ಹೊಂದಿದ್ದಾರೆ. ‌

ಪತ್ನಿ ಇಬ್ಬರು ಪುತ್ರರು ಅಮೆರಿಕದಲ್ಲಿದ್ದಾರೆ. ಅವರ ಹೆಸರಲ್ಲಿ ದೇಶದಲ್ಲಿ ಯಾವುದೇ ಆಸ್ತಿ ಇರುವುದನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ.

ಅಶೋಕ ಖೇಣಿ ಅವರು ಕೋಟ್ಯಧಿಪತಿಯಾದರೂ ತಮ್ಮ ಬಳಿ ಕೇವಲ ₹ 38 ಸಾವಿರ ಇಟ್ಟುಕೊಂಡಿದ್ದಾರೆ. ಎಕ್ಸಿಸ್ ಬ್ಯಾಂಕ್‌ನಲ್ಲಿ ₹ 1.10 ಲಕ್ಷ, ಅಮೆರಿಕದ ಸುಸ್ಕ್ಯೂಹನಾ ಬ್ಯಾಂಕ್‌ ಖಾತೆಯಲ್ಲಿ ₹ 9,305, ಎಕ್ಸಿಸ್ ಬ್ಯಾಂಕ್‌ ಮುಂಬೈ ಶಾಖೆಯಲ್ಲಿ ₹ 76,601, ಬೀದರ್‌ನ ವಿದ್ಯಾನಗರದ ಎಸ್‌ಬಿಐ ಶಾಖೆಯಲ್ಲಿ ₹ 3.34 ಲಕ್ಷ, ಎಕ್ಸಿಸ್ ಬ್ಯಾಂಕ್‌ನ ಬೆಂಗಳೂರು ಸದಾಶಿವನಗರ ಶಾಖೆಯಲ್ಲಿ ₹ 7.21 ಲಕ್ಷ, ಬಸವೇಶ್ವರ ನಗರ ಶಾಖೆಯಲ್ಲಿ ₹ 1.14 ಲಕ್ಷ, ಬೆಂಗಳೂರಿನ ಕೋಟಕ್‌ ಮಹಿಂದ್ರಾ ಬ್ಯಾಂಕ್‌ನಲ್ಲಿ ₹ 21,190 ಪುಣೆ ಐಸಿಸಿ ಬ್ಯಾಂಕ್‌ನಲ್ಲಿ ₹ 11 ಸಾವಿರ, ಬೆಂಗಳೂರು ಶಾಖೆಯ ಉಳಿತಾಯ ಖಾತೆಯಲ್ಲಿ ₹ 5 ಲಕ್ಷ, ಚಾಲ್ತಿ ಖಾತೆಯಲ್ಲಿ ₹ 1 ಲಕ್ಷ, ಬ್ಯಾಂಕ್‌ ಆಫ್‌ ಇಂಡಿಯಾದ ಕೆಂಟೋನ್ಮಂಟ್‌ ಶಾಖೆಯಲ್ಲಿ ₹ 1.20 ಲಕ್ಷ, ಎಸ್‌ಬಿಐ ಚಾಲ್ತಿ ಖಾತೆಯಲ್ಲಿ ಯಾವುದೇ ಹಣ ಇಲ್ಲ. ಒಟ್ಟು 12 ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು ₹ 21.20 ಲಕ್ಷ ಹಣ ಇದೆ.

ನಂದಿ ಎಕಾನಿಮಿಕ್‌ ಕಾರಿಡಾರ್‌ ಎಂಟರ್‌ಪ್ರೈಸೆಸ್‌ ಲಿಮಿಟೆಡ್‌ನಲ್ಲಿ ₹ 20.61 ಕೋಟಿ ಮೌಲ್ಯದ 30 ಷೇರುಗಳು, ಜಯಪತ್ರಿ ಇನ್‌ವೆಸ್ಟೆಮೆಂಟ್ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ₹ 19,960 ಮೌಲ್ಯದ 1996 ಷೇರುಗಳು ಹೀಗೆ ಒಟ್ಟು 17 ಕಂಪನಿಗಳು, ಮ್ಯುಚ್‌ವಲ್‌ ಫಂಡ್‌ಗಳಲ್ಲಿ ಒಟ್ಟು ₹ 21.27 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.

ಎಕೆಕೆ ಎಂಟರ್‌ಟೇನ್‌ಮೆಂಟ್ ಲಿಮಿಟೆಡ್, ಅಶೋಕ್‌ ಖೇಣಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌, ಇಂಡಿಯಾ ಇಂಟರ್‌ನ್ಯಾಷನಲ್‌ ಇನ್‌ಫ್ರಾಸ್ಟ್ರಕ್ಚರ್ ಎಂಜಿನಿಯರ್ಸ್‌ ಲಿಮಿಟೆಡ್, ನಂದಿ ಎಂಜಿನಿಯರಿಂಗ್ ಲಿಮಿಟೆಡ್‌ನಿಂದ ಸಾಲ ಹಾಗೂ ಬಾನು ಧಮ್ಮನಗಿ, ರಮೇಶ ಎಂ.ಎಚ್. ಅವರಿಂದ ಮುಂಗಡ ಸೇರಿ ಒಟ್ಟು ₹ 55.58 ಕೋಟಿ ಸಾಲ ಹೊಂದಿದ್ದಾರೆ. ಮೆರ್ಸಿಡೀಸ್‌, ಫೆರಾರಿ ಹಾಗೂ ಜಾಗ್ವಾರ್ ಕಾರುಗಳಿವೆ.

₹ 2.24 ಲಕ್ಷ ಮೌಲ್ಯದ 4 ತೊಲ ಚಿನ್ನದ ಸರ, ₹ 11.84 ಲಕ್ಷ ಮೌಲ್ಯದ 21 ತೊಲ ಬಂಗಾರದ ಬಳೆಗಳು, ₹ 11.73 ಲಕ್ಷ ಮೌಲ್ಯದ 20 ತೊಲ ಬ್ರಾಸ್‌ಲೆಟ್, ₹ 3.87 ಲಕ್ಷ ಮೌಲ್ಯದ ಬೆಳ್ಳಿಯ ಸಮಯ, ₹ 40 ಲಕ್ಷ ಮೌಲ್ಯದ ವಾಚ್ ಸೇರಿ ಒಟ್ಟು ₹ 2.70 ಕೋಟಿ ಮೌಲ್ಯದ ಚಿನ್ನಾಭರಣ ಇದೆ. ಎಲ್ಲವೂ ಸೇರಿ ₹ 101 ಕೋಟಿ 27 ಲಕ್ಷ ಮೌಲ್ಯದ ಚರಾಸ್ತಿ ಇದೆ.

ಬೀದರ್‌ ತಾಲ್ಲೂಕಿನ ಖೇಣಿರಂಜೋಳ ಗ್ರಾಮದಲ್ಲಿ ಕೃಷಿಯೇತರ ಜಮೀನು ಸೇರಿ 33 ಲಕ್ಷ ಮೌಲ್ಯದ ಜಮೀನು, ಅಮೆರಿಕದಲ್ಲಿ ಜಂಟಿ ಮಾಲೀಕತ್ವದಲ್ಲಿ ₹ 21.46 ಕೋಟಿ ಮೌಲ್ಯದ ಜಮೀನು ಇದೆ. ಮುಂಬೈ, ಮೈಸೂರು, ಬೆಂಗಳೂರು ಹಾಗೂ ಅಮೆರಿಕದಲ್ಲಿ ಮನೆಗಳು ಇವೆ. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ ₹ 87,66,69,682 ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಶೋಕ ಖೇಣಿ ವಿದೇಶದಲ್ಲಿದ್ದಾಗ ನಕಲಿ ಸಹಿ ಮಾಡಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿದ ಆರೋಪ ಇದೆ. ಹಲಸೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT