ಸೋಮವಾರ, ಜೂನ್ 14, 2021
23 °C

ಕರ್ನಾಟಕ ಕಾಲೇಜು: ಸಾಧಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಇಲ್ಲಿಯ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸನ್ಮಾನಿಸಲಾಯಿತು.

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ರೋಹಿಣಿ ಮಹಾಜನ (ಶೇ 94.16), ಸಂಜನಾ ಚಂದ್ರಕಾಂತ (ಶೇ 94,), ಕಲಾ ವಿಭಾಗದ ಮಹೇಶ ಶಂಕರ (ಶೇ 94.5) ಹಾಗೂ ವಿಜ್ಞಾನ ವಿಭಾಗದ ಮಧುಕೇಶವ ಪ್ರಭು ಅವರನ್ನು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರು ಶಾಲು ಹೊದಿಸಿ ಸನ್ಮಾನಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಸಿದ್ರಾಮ ಪಾರಾ, ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಮಹೇಕುಮಾರ ಭದಭದೆ, ರಾಜಶೇಖರ ತಾಂಡೂರ, ಚಂದಾ ಶಾಂತಕುಮಾರ, ಡಿ.ವಿ. ಸಿಂದೋಲ್, ಡಾ. ಎಂ.ಎ. ಶೇರಿಕಾರ, ಶೆಟಕಾರ ಚಂದ್ರಕಾಂತ, ಮಲ್ಲಿಕಾರ್ಜುನ ಹತ್ತಿ, ವಿಜಯಕುಮಾರ ಗುನ್ನಳ್ಳಿ, ವೀರಭದ್ರಪ್ಪ ಬುಯ್ಯಾ, ಸತೀಶ ಪಾಟೀಲ, ಗಾದಗಿ ಶಿವಾನಂದ, ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ, ಉಪನ್ಯಾಸಕರಾದ ಸಚಿನ್ ವಿಶ್ವಕರ್ಮ, ಮಹೇಶ ಬಿರಾದಾರ, ರಾಜೇಶ್ವರಿ ಪಾಟೀಲ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.