ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

Last Updated 1 ನವೆಂಬರ್ 2021, 13:15 IST
ಅಕ್ಷರ ಗಾತ್ರ

ಬೀದರ್: ನಗರದ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ತೋಟಗಾರಿಕೆ ಕಾಲೇಜು: ನಗರದ ತೋಟಗಾರಿಕೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಡೀನ್ ಡಾ. ಎಸ್.ವಿ. ಪಾಟೀಲ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಹಾಯಕ ಪ್ರಾಧ್ಯಾಪಕರಾದ ಡಾ. ಅಶೋಕ ಸೂರ್ಯವಂಶಿ, ಡಾ. ಸಿದ್ದರಾಮ ಎಸ್. ನೆಂಗಾ ಇದ್ದರು. ಶುಭಂ ಜೆ. ಕೊರಬು ನಿರೂಪಿಸಿದರು.

ನಟ ಪುನೀತ್ ರಾಜಕುಮಾರ್ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
ಅಶೋಕ ಖೇಣಿ ಕಚೇರಿ: ನಗರದ ರಾಂಪೂರೆ ಕಾಲೊನಿಯಲ್ಲಿ ಇರುವ ಮಾಜಿ ಶಾಸಕ ಅಶೋಕ ಖೇಣಿ ಅವರ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡಲಾಯಿತು.

ನಿವೃತ್ತ ಪೊಲೀಸ್ ಅಧಿಕಾರಿ ಶಿವಾನಂದ ಘಟ್ಟಿ, ಮುಖಂಡರಾದ ಸುನೀಲ್ ಕಾಶೆಂಪೂರ, ಪ್ರಕಾಶ ಜಾಧವ್, ಅಶೋಕ ಖೇಣಿ ಅವರ ಆಪ್ತ ಸಹಾಯಕ ಸಂದೀಪ್ ಉದಗಿರೆ, ಬಸವರಾಜ ವಡ್ಡೆ, ಮಾರ್ಟಿನ್, ಕಾಂಗ್ರೆಸ್ ಬೀದರ್ ದಕ್ಷಿಣ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಲೋಕೇಶ ಕನಶೆಟ್ಟಿ, ಜಯಪ್ರಕಾಶ, ಸೈಲಾನಿ ಇದ್ದರು.

ಪಟ್ಟದ್ದೇವರು ಪ್ರಸಾದ ನಿಲಯ: ನಗರದ ವಿದ್ಯಾನಗರ ಕಾಲೊನಿಯ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ. ಬಿರಾದಾರ ರಾಷ್ಟ್ರ ಧ್ವಜಾರೋಹಣ ಮಾಡಿದರು.

ನಿಲಯದ ಕಾರ್ಯಕರ್ತ ಮಲ್ಲಿಕಾರ್ಜುನ ಹುಡಗಿ ತಾಯಿ ಭುವನೇಶ್ವರಿ, ಬಸವೇಶ್ವರ ಹಾಗೂ ಡಾ. ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರೊ. ಉಮಾಕಾಂತ ಮೀಸೆ, ಶ್ರೀಕಾಂತ ಸ್ವಾಮಿ, ಅಶೋಕ ಪಾಟೀಲ ಇದ್ದರು.

ಕಾರ್ಮಿಕರ ಮಹಾಸಂಘ:ನಗರದ ನೌಬಾದ್‍ನ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಉದ್ಘಾಟಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಸಾಧುರೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಪ್ರೇಮಕುಮಾರ ಕಾಂಬಳೆ, ವೀರ ಕನ್ನಡಿಗರ ಸೇನೆ ರಾಜ್ಯ ಘಟಕದ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷ ಮುಕೇಶ ಶಹಾಗಂಜ್, ಗೌತಮ ಭೋಸ್ಲೆ, ಮಲ್ಲಿಕಾರ್ಜುನ ಮೋಳಕೆರೆ, ಸತೀಶ್ ವಗ್ಗೆ, ಅಶೋಕ ವಗ್ಗೆ, ಕಂಟೆಪ್ಪ ಗುಪ್ತ, ಜೈಭೀಮ ಕುರುಬಖೇಳಗಿ, ವಿಜಯಕುಮಾರ ಪಾಟೀಲ, ಗುಣವಂತ ಸಿಂಧೆ, ಶ್ರೀಕಾಂತ ಸುರೇಶ ಇದ್ದರು.

ಗ್ಲೊಬಲ್ ಸೈನಿಕ ಅಕಾಡೆಮಿ: ನಗರದ ಗ್ಲೊಬಲ್ ಸೈನಿಕ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪೂರೆ ಧ್ವಜಾರೋಹಣ ಮಾಡಿದರು.

ಅಕಾಡೆಮಿ ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ, ಡಾ. ನಿತೇಶಕುಮಾರ ಬಿರಾದಾರ, ಚೇತನ್ ಮೇಗೂರ್, ವಿಮಲಾ ಸಿಕೇನಪೂರೆ, ಮುಖ್ಯ ಶಿಕ್ಷಕ ಪೃಥ್ವಿರಾಜ್, ಕಾರಂಜಿ ಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಸಭಿಕರ ಮನ ರಂಜಿಸಿದವು. ಚನ್ನಬಸವ ಪತ್ತಿನ ಸೌಹಾರ್ದ: ನಗರದ ಚನ್ನಬಸವ ಪತ್ತಿನ ಸೌಹಾರ್ದ ನಿಯಮಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ನಿಯಂತ್ರಣಾಧಿಕಾರಿ ವೀರಭದ್ರಪ್ಪ ಉಪ್ಪಿನ್, ಸೌಹಾರ್ದ ಉಪಾಧ್ಯಕ್ಷ ಸಂಜೀವಕುಮಾರ ಶೀಲವಂತ, ಕಾರ್ಯದರ್ಶಿ ಶಿವರಾಜ ಕೊಡ್ಡೆ, ವಕೀಲ ಗಂಗಪ್ಪ ಸಾವಳೆ, ಗಂಗಾಧರ ಪಾಟೀಲ, ಅಶೋಕ ಶೀಲವಂತ, ರಮೇಶ, ವೀರಶೆಟ್ಟಿ, ಶಿವಾನಂದ, ಎ. ಗುರುದೇವಿ ಇದ್ದರು.

ಬೀದರ್ ಡೇರಿ:

ಬೀದರ್: ತಾಲ್ಲೂಕಿನ ಚಿಕ್ಕಪೇಟೆ ಸಮೀಪದ ಕೆಎಂಎಫ್ ಬೀದರ್ ಡೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಕಲಬುರ್ಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಧ್ವಜಾರೋಹಣ ನೆರವೇರಿಸಿದರು.
ನಿರ್ದೇಶಕ ಭೀಮರಾವ್ ಬಳತೆ, ಒಕ್ಕೂಟದ ಅಧಿಕಾರಿ ಶಾಲಿವಾನ್ ವಾಡೆ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT