ಶುಕ್ರವಾರ, ಮೇ 14, 2021
32 °C
ಕಸಾಪ ಚುನಾವಣೆ ಸಭೆಯಲ್ಲಿ ಅಸಮಾಧಾನ

ಕನ್ನಡಿಗರ ಮಧ್ಯೆ ಭೇದ ಸಲ್ಲದು: ಶಿವಾಜಿರಾವ ಚಿಟಗಿರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ನಾಡಿನಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೆ. ಆದರೆ ಇವರು ಮರಾಠಿಗರು ಅವರು ತೆಲಂಗಾಣದವರು ಎಂದು ಭೇದ ಭಾವ ಮಾಡುವುದು ಸರಿಯಲ್ಲ’ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಶಿವಾಜಿರಾವ ಚಿಟಗಿರೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚುನಾವಣೆ ಅಂಗವಾಗಿ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಶಿವಾಜಿರಾವ ಪಾಟೀಲ ಮಾತನಾಡಿ, ‘ನನ್ನ ಮಾತೃ ಭಾಷೆ ಮಾರಾಠಿ. ಆದರೆ ನಾನು ಕನ್ನಡ ಚೆನ್ನಾಗಿ ಬಲ್ಲೆ. ನನ್ನ ಗೆಳೆಯರು, ಹಿತೈಸಿಗಳೆಲ್ಲ ಕನ್ನಡಿಗರೇ. ಈ ಹಿಂದೆ ನಡೆದ ಬಹುತೇಕ ಎಲ್ಲ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡಿಗರ ಜತೆ ಕೈಜೋ ಡಿಸಿ ಕೆಲಸ ಮಾಡಿದ್ದೇನೆ’ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, ‘ನಮ್ಮಲ್ಲಿ ಯಾವುದೇ ಭಾಷೆ, ಜಾತಿ ಭೇದ ಇರುವುದಿಲ್ಲ. ಜಾನಪದ ಪರಿಷತ್ ಮೂಲಕ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಹಿಂದೆ ನಡೆದಂತೆ ಮುಂದೆ ನಡೆಯಲು ಅವಕಾಶ ಕೊಡುವುದಿಲ್ಲ’ ಎಂdಉ ಹೇಳಿದರು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಮಾತನಾಡಿ, ‘ಈ ಚುನಾವಣೆಯಲ್ಲಿ ಕನ್ನಡ ಭವನ ಕಟ್ಟುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಈ ವಿಷಯ ಚುವಾವಣೆ ಅಸ್ತ್ರವಾಗಿಯೂ ಬಳಸಿಕೊಳ್ಳ ಲಾಗುತ್ತಿದೆ. ಆದರೆ ವಾಸ್ತವಿಕವಾಗಿ ಈಗ ಮಂಜೂರಿ ಆಗಿರುವುದು ಜಿಲ್ಲಾಡಳಿತದ ಕನ್ನಡ ಭವನ. ಜಿಲ್ಲಾಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಹೀಗಾದರೆ ಸಾಹಿತ್ಯ ಪರಿತ್ತಿನ ಭವನ ಆಗಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಶಿಕ್ಷಕ ಸೂರ್ಯಕಾಂತ ಸಿಂಗೆ, ಶಾಮಸುಂದರ ಖಾನಾಪುರ, ಧುರೀಣ ಪ್ರಕಾಶ ಘುಳೆ, ನಾಗನಾಥ ಸಾಡಂಗಲೆ, ಚೇತನ ಕಪ್ಪೆಕೇರಿ, ಗುರುನಾಥ ದೇಶಮುಖ, ಮಲ್ಲಿಕಾರ್ಜುನ ಹಿಪ್ಪಳಗಾವೆ. ಶಿವರಾಜ ಶೆಟಕಾರ, ಸಂಜುಕುಮಾರ ಜುಮ್ಮಾ, ಬಸವರಾಜ ಶೆಟಕಾರ, ಅನೀಲ ಜಿರೋಬೆ ಮತ್ತಿತರರು ಇದ್ದರು. ಇದೇ ವೇಳೆ ಕಸಾಪ ಜಿಲ್ಲಾ ಅಧ್ಯಕ್ಷ ಚುನಾವಣೆ ಪ್ರಚಾರ ಕಚೇರಿ ಉದ್ಘಾಟಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.