ಶನಿವಾರ, ಮೇ 21, 2022
23 °C

ಖಟಕಚಿಂಚೋಳಿ; ಸಿದ್ಧಾರೂಢ ಸ್ವಾಮೀಜಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಚಳಕಾಪುರ ಗ್ರಾಮದಲ್ಲಿ ಭಾನುವಾರ ಸಿದ್ಧಾರೂಢ ಸ್ವಾಮೀಜಿಯ ರಥೋತ್ಸವ ಸಂಭ್ರಮದಿಂದ ಜರುಗಿತು.

ಬೀದರ್‌ನ ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಸಂಜೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ್ದ ಸಿದ್ಧಾರೂಢರ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಶಾಸಕ ಈಶ್ವರ ಖಂಡ್ರೆ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವದಲ್ಲಿ ಭಾಗ ವಹಿಸಿದ ಭಕ್ತರು ಸಿದ್ಧಾರೂಢ ಸ್ವಾಮೀಜಿಗೆ ಜಯವಾಗಲಿ, ಸಿದ್ಧಾರೂಢರ ಜೋಳಿಗೆ ನಾಡಿಗೆಲ್ಲ ಹೋಳಿಗೆ ಯಾಗಲಿ ಎಂಬ ಘೋಷಣೆ ಕೂಗಿದರು.

ವಾದ್ಯ ಮೇಳಗಳೊಂದಿಗೆ ಬ್ರಹ್ಮವಿದ್ಯಾಶ್ರಮದಿಂದ ಹನುಮಾನ ಮಂದಿರದ ರಥ ಎಳೆಯಲಾಯಿತು. ರಥೋತ್ಸವ ಸಾಗುವಾಗ ಭಕ್ತರು ಶ್ರದ್ಧಾ, ಭಕ್ತಿಯಿಂದ ಕೈಮುಗಿದು, ಪಲ್ಲಕ್ಕಿಗೆ ಹೂ ಮಳೆ ಸುರಿಸಿದರು.

ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಬಂದಿದ್ದರು.

ಬ್ರಹ್ಮವಿದ್ಯಾಶ್ರಮದ ಶಂಕರಾನಂದ ಸ್ವಾಮೀಜಿ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ಬಾಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕುಲಕರ್ಣಿ, ಸುಭಾಷ ಕೆನಾಡೆ, ಪಂಚಾಯಿತಿ ಸದಸ್ಯ ಶಿವಪ್ಪ ರೊಟ್ಟಿ, ಶ್ರೀನಾಥ ಮಣಕೂಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು