ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು ಅಂತರಂಗದ ಸೌಂದರ್ಯ

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು
Last Updated 21 ಜೂನ್ 2021, 11:16 IST
ಅಕ್ಷರ ಗಾತ್ರ

ಬೀದರ್‌: ನಗೆ ದೇವರು ಕೊಟ್ಟ ಅಮೂಲ್ಯ ವರ. ಸುಖ-ದುಃಖ ಎರಡರಲ್ಲಿಯೂ ನಗು ಮರೆಯಾಗಬಾರದು. ಇದೊಂದು ಅಂತರಂಗ ಸೌಂದರ್ಯ. ನಗುಮುಖದಿಂದ ನಮ್ಮ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ನಗುವುದರಿಂದ ಆರೋಗ್ಯ ಸರಿಯಾಗಿ ಇರುತ್ತದೆ. ಸಕರಾತ್ಮಕ ಭಾವನೆಗಳು ಅಳವಡಿಸಿಕೊಂಡಾಗ ನಗು ಮರೆಯಾಗುವುದಿಲ್ಲ. `ನಗುವ ನಗಿಸುವ ನಗಿಸಿ ನಗುತ್ತ ಬಾಳುವ ವರವಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ’ ಎಂಬ ನುಡಿ ಅರ್ಥಪೂರ್ಣ. ಕುಟಿಲ ನಗೆ, ಕೇವಲ ಸ್ವಾರ್ಥ ಸಾಧನೆಗೆ ನಗುವುದು, ಮತ್ತೊಬ್ಬರನ್ನು ಅಣಕಿಸಿ ಹೀಯಾಳಿಸಿ ನಗುವುದು ನಗೆಯಲ್ಲ. ಅಂತರಂಗದ ಹೊರಹೊಮ್ಮಿದ ಸಹಜ ನಗೆ ದೇವರು ಮೆಚ್ಚುತ್ತಾನೆ. ಪರಿಶುದ್ಧ ನಗೆಯಿಂದ ದೇವ ದರ್ಶನವಾಗುತ್ತದೆ.

ನಗೆ ಎಲ್ಲರನ್ನು ಸದಾ ಸಂತೋಷವಾಗಿಡುವ ಸಾಧನ ಸುಲಭವಾಗಿ ಸಿಗುತ್ತದೆ. ನಗೆ ಎಲ್ಲರನ್ನು ಒಂದುಗೂಡಿಸುವ ತಾಕತ್ತು ಹೊಂದಿದೆ. ಅದೊಂದು ಅಮೂಲ್ಯ ಸಂಪತ್ತು. ಅದೊಂದು ಆತ್ಮ ಸಾಕ್ಷಾತ್ಮಾರ ಒಂದು ಸಾಧನವೂ ಹೌದು. ನಗೆಯು ಜನಶಕ್ತಿ ಒಂದು ಮಾಡುತ್ತದೆ. ಹೆಚ್ಚು ಹೆಚ್ಚು ಆತ್ಮೀಯರನ್ನು ಸೃಷ್ಟಿಸುತ್ತದೆ. ನಗೆ ಕ್ರೂರಿಗಳು ಸಹ ಕರಗುವಂತೆ ಮಾಡುತ್ತದೆ. ನಗುವ ಸುಮ್ಮನೆ ಬರುವುದಿಲ್ಲ. ಮನದಲ್ಲಿ ಪರಿಶುದ್ಧ ಭಾವನೆಗಳು ಒಡಮೂಡಬೇಕು. ಮಗುವಿನ ಮನಸ್ಸು ನಮ್ಮದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT