ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಲಘುವಾಗಿ ವರ್ತಿಸದಿರಲಿ: ಮನೆಯಂಗಳದಲ್ಲಿ ಮಾತು ಸಂವಾದದಲ್ಲಿ ಅಲ್ಲೂರೆ ಸಲಹೆ

ಮನೆಯಂಗಳದಲ್ಲಿ ಮಾತು ಸಂವಾದದಲ್ಲಿ ಅಲ್ಲೂರೆ ಸಲಹೆ
Last Updated 16 ಫೆಬ್ರುವರಿ 2021, 13:44 IST
ಅಕ್ಷರ ಗಾತ್ರ

ಬೀದರ್: ಗುರು ಗುರುವಾಗಿಯೇ ಇರಬೇಕು. ಲಘುವಾಗಿ ವರ್ತಿಸಬಾರದು. ಸಣ್ಣತನ ತೋರಬಾರದು ಎಂದು ಉಪನ್ಯಾಸಕ ರಾಜಕುಮಾರ ಅಲ್ಲೂರೆ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಆಗಿ ಈವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿದ ತೃಪ್ತಿ ತಮಗೆ ಇದೆ ಎಂದು ಹೇಳಿದರು.

ಬಾಲ್ಯದಲ್ಲಿ ಕುರಿಗಾಹಿಯಾಗಿ ದುಡಿದ, ಸರ್ಕಾರಿ ಶಾಲೆಯಲ್ಲಿ ಓದಿ ಉಪನ್ಯಾಸಕ ಹುದ್ದೆ ಗಿಟ್ಟಿಸಿಕೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಡಾ. ಕೆ. ರವೀಂದ್ರನಾಥ ಅವರ ಮಾರ್ಗದರ್ಶನದಲ್ಲಿ ‘ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಕನ್ನಡ ಶಾಸನಗಳು: ಸಾಂಸ್ಕೃತಿಕ ಅಧ್ಯಯನ’ ಕುರಿತು ಸಂಶೋಧನಾ ಪ್ರಬಂಧ ಬರೆದು ಅದೇ ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದ್ದನ್ನೂ ತೆರೆದಿಟ್ಟರು.

ಬೀದರ್‌ನ ಗಟ್ಟಿ ಸಂಶೋಧಕರಲ್ಲಿ ರಾಜಕುಮಾರ ಅಲ್ಲೂರೆ ಒಬ್ಬರು. ಪರಿಷತ್ತು ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಸಾಹಿತಿ, ಸಾಧಕರ ಸಾಂಸ್ಕೃತಿಕ ಸಾಧನೆಗಳನ್ನು ಮನೆ ಮನಕ್ಕೆ ತಲುಪಿಸುವುದು ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದ ಆಶಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ತಿಳಿಸಿದರು.

ಪ್ರಾಚಾರ್ಯ ಡಾ. ಬಂಡಯ್ಯ ಸ್ವಾಮಿ ಮಾತನಾಡಿದರು. ದೇವೇಂದ್ರ ಕರಂಜೆ ಹಾಗೂ ಪ್ರತಿಭಾ ಮಂಚ್ ಸಂವಾದ ನಡೆಸಿಕೊಟ್ಟರು.

ಸಾಹಿತಿಗಳಾದ ಓಂಪ್ರಕಾಶ ದಡ್ಡೆ, ಈಶ್ವರಯ್ಯ ಕೋಡಂಬಲ್, ವಿದ್ಯಾವತಿ ಬಲ್ಲೂರ, ಶಿವರಾಜ ಪಾಟೀಲ ಜಗನ್ನಾಥ ಕಮಲಾಪುರೆ ಇದ್ದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಬಸವರಾಜ ಬಲ್ಲೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT