ಬುಧವಾರ, ಜೂನ್ 29, 2022
24 °C

ಬೀದರ್‌: ಕಸಾಪ ಪರೀಕ್ಷಾ ಕೇಂದ್ರಕ್ಕೆ ಮಹೇಶ ಜೋಶಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರವೇಶ, ಕಾವ, ಜಾಣ ಹಾಗೂ ತರ್ನ ಪರೀಕ್ಷೆಗಳು ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದು ಪರೀಕ್ಷಾ ಕೇಂದ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಪರೀಕ್ಷಾರ್ಥಿಗಳೊಂದಿಗೆ ಮಾತನಾಡಿ, ಪರೀಕ್ಷಾ ಸುಧಾರಣೆ ಬಗ್ಗೆ ವಿವರಿಸುತ್ತ ಮುಂದಿನ ಸಲ ಪರೀಕ್ಷೆ ಕಟ್ಟುವವರಿಗೆ ರಜಾದಿನಗಳಲ್ಲಿ ಕಡ್ಡಾಯ ತರಗತಿ ಆಯೋಜಿಸುವುದು, ಪಠ್ಯಕ್ರಮದ ಬಗ್ಗೆ ಕಾರ್ಯಾಗಾರ ನಡೆಸುವುದು ಸೇರಿದಂತೆ ಹಲವಾರು ರೀತಿಯ ಬದಲಾವಣೆ ತರುವುದಾಗಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶಟ್ಟಿ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವಕುಮಾರ ಕಟ್ಟೆ, ಟಿ. ಎಂ. ಮಚ್ಚೆ, ಕರ್ನಾಟಕ ಪಪೂ ಕಾಲೇಜು ಪ್ರಾಚಾರ್ಯ ಬಸವರಾಜ ಬಲ್ಲೂರ, ಕರ್ನಾಟಕ ಫಾರ್ಮಸಿ ಕಾಲೇಜು ಪ್ರಾಚಾರ್ಯ ಕ್ರಾಂತಿಕುಮಾರ ಸಿರ್ಸೆ, ಸಾಹಿತಿ ರಮೇಶ ಬಿರಾದಾರ, ಕೇಂದ್ರ ಕಸಾಪ ಪರೀಕ್ಷಾ ಸಂಯೋಜಕರಾದ ಮುಕುಂದ ಎಲ್, ರಾಜಪ್ಪ ಬಿ. ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು