ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: 30 ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣೆ

Last Updated 21 ನವೆಂಬರ್ 2021, 11:34 IST
ಅಕ್ಷರ ಗಾತ್ರ

ಬೀದರ್: ಮಲಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಕರ್ನಾಟಕ ಕಾಲೇಜಿನಲ್ಲಿ 30 ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶನಿವಾರ ತಲಾ ₹ 5 ಸಾವಿರ ಶಿಷ್ಯವೇತನದ ಚೆಕ್ ವಿತರಿಸಲಾಯಿತು.

ಟ್ರಸ್ಟ್‍ನವರು ತಮ್ಮ ಲಾಭದಲ್ಲಿ ಶೇ 5 ರಷ್ಟನ್ನು ಸಮಾಜ ಸೇವೆಗೆ ಬಳಸುತ್ತಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರಭಾ ಚಾಮಾ ನುಡಿದರು.

ಮಲಬಾರ್ ಗೋಲ್ಡ್ ಸಹಾಯಕ ವ್ಯವಸ್ಥಾಪಕ ಶಿವಕುಮಾರ ರೆಡ್ಡಿ ಶಿಷ್ಯವೇತನ ಕುರಿತು ವಿವರಿಸಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಂಟಿ ಕಾರ್ಯದರ್ಶಿ ಸತೀಶ್ ಪಾಟೀಲ, ಸದಸ್ಯರಾದ ಚಂದ್ರಕಾಂತ ಶೆಟಕಾರ್, ರವಿ ಹಾಲಹಳ್ಳಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಾಚಾರ್ಯ ಮಲ್ಲಿಕಾರ್ಜುನ ಚಲುವಾ, ಬೀದರ್‍ನ ಮಲಬಾರ್ ಗೋಲ್ಡ್ ಮುಖ್ಯಸ್ಥ ಅಮ್ಜದ್ ವಿಕೆ, ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ, ಶ್ರೀಕಾಂತ ದೊಡ್ಡಮನಿ, ಸಚಿನ್ ವಿಶ್ವಕರ್ಮ ಇದ್ದರು. ಡಾ. ರವಿಚಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT