ಶುಕ್ರವಾರ, ಜೂನ್ 5, 2020
27 °C

ಲಾಕ್‌ಡೌನ್‌ಗೆ ಭಾಲ್ಕಿಯಲ್ಲಿ ಮೊದಲ ಬಲಿ, ಊಟ ಸಿಗದಿದ್ದಕ್ಕೆ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಲಾಕ್‌ಡೌನ್‌ ಆದ ನಂತರ ಸರಿಯಾಗಿ ಊಟ ಸಿಗದೆ ಹೋಟೆಲ್‌ ಕಾರ್ಮಿಕರೊಬ್ಬರು ಪಟ್ಟಣದ ಝರಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಂಧಿ ವೃತ್ತ ಸಮೀಪ ಉಡುಪಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ಭಾಸ್ಕರ್(41) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಭಾಸ್ಕರ್ ಅವರಿಗೆ ಮದ್ಯದ ಚಟ ಇತ್ತು. ಹೋಟೆಲ್‌ ಬಂದ್‌ ಆದ ಮೇಲೆ ಊಟದ ಸಮಸ್ಯೆ ಎದುರಾಗಿತ್ತು. ಅವರ ಬಳಿಯೂ ಹಣ ಇರಲಿಲ್ಲ. ಒಬ್ಬರೇ ವಾಸವಾಗಿದ್ದ ಅವರಿಗೆ ಯಾರು ಸಂಬಂಧಿಗಳೂ ಇಲ್ಲ. ಹಸಿನಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಭಾಸ್ಕರ್ ಮೊನ್ನೆ ರಾತ್ರಿ ಬಾವಿಗೆ ಹಾರಿರುವ ಸಾಧ್ಯತೆ ಇದೆ. ಇವತ್ತು  ಬೆಳಗಿನ ಜಾವ ಶವ ಬಾವಿಯಲ್ಲಿ ತೇಲುತ್ತಿತ್ತು. ಪೊಲೀಸರು ಶವವನ್ನು ಹೊರಗೆ ತೆಗೆದಿದ್ದಾರೆ. ಭಾಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು