ಗುರುವಾರ , ಏಪ್ರಿಲ್ 2, 2020
19 °C

ಬೀದರ್: ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಕನ್ನಡ ಸೇನಾ ಕರ್ನಾಟಕ ತಾಲ್ಲೂಕು ಸಂಘಟನೆಯಿಂದ ಮಂಗಳವಾರ ಇಲ್ಲಿನ ಬಸವೇಶ್ವರ ಮತ್ತು ಡಾ.ಅಂಬೇಡ್ಕರ್ ವೃತ್ತದ ಬಳಿ ತರಕಾರಿ ಮಾರಾಟ ಮಾಡುತ್ತಿರುವ ಮಹಿಳಾ ಮತ್ತು ಪುರುಷ ವ್ಯಾಪಾರಸ್ಥರಿಗೆ ಉಚಿತವಾಗಿ 200 ಮಾಸ್ಕ್ ವಿತರಿಸಲಾಯಿತು.

ಕನ್ನಡ ಸೇನೆ ತಾಲ್ಲೂಕು ಘಟಕದ ಆಧ್ಯಕ್ಷ ದತ್ತು ಪರೀಟ ಲದ್ದಿ ಉಚಿತ ಮಾಸ್ಕ್‌ ವಿತರಿಸಿ ಮಾತನಾಡಿ,‘ಜನರ ಆರೋಗ್ಯದ ದ್ರಷ್ಟಿಯಿಂದ ತರಕಾರಿ ಮಾರಾಟಗಾರರು ಪ್ರಮುಖ ಪಾತ್ರವಹಿಸಲಿದ್ದು. ತರಕಾರಿ ಮಾರಾಟ ಮಾಡುವಾಗ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ತರಕಾರಿ ಮಾರಾಟ ಮಾಡಬೇಕು’ ಎಂದರು. ಪುರಸಭೆ ಸದಸ್ಯ ವಿಜಯಕುಮಾರ ಭಾಸಪಳ್ಳಿ, ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಉಪಾಧ್ಯಕ್ಷ ಎಮ್‍ಡಿ ಮಹೇಬೂಬ್, ನಗರ ಅಧ್ಯಕ್ಷ ಸೋಮನಾಥ ಮಡಿವಾಳ, ನಾಗು ಗಾದಾ, ಮಚ್ಚೆಂದ್ರ ಗವಳಿ, ಆನಂದ ಮಾಳಗೆ, ವಿಜಯಕುಮಾರ, ಬಾಲಾಜಿ, ಹಾಗೂ ಶಿವಕುಮಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು