ಬೀದರ್: ‘ಬೀದರ್ ಜಿಲ್ಲೆಯಲ್ಲಿ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರು ನೀಡಿದ ಸಂಸದರ ನಿಧಿ ಬಳಕೆಯಿಂದ ಕ್ಷೀರಕ್ರಾಂತಿ ಆಗಿದೆ’ ಎಂದು ಕಲಬುರಗಿ–ಬೀದರ್ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ತಿಳಿಸಿದ್ದಾರೆ.

‘ಬೀದರ್ ಜಿಲ್ಲೆಯಲ್ಲಿರುವ ಒಟ್ಟು 518 ಹಾಲು ಉತ್ಪಾದಕರ ಸಂಘಗಳ ಪೈಕಿ 100ಕ್ಕಿಂತ ಕಡಿಮೆ ಸಂಘಗಳು ಕಾರ್ಯನಿರ್ವಹಿಸುತ್ತಿದ್ದವು. ಇನ್ನುಳಿದ ಸಂಘಗಳು ಸಂಪೂರ್ಣ ಕಾರ್ಯಾಚರಣೆ ನಿಲ್ಲಿಸಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಡಿ.ವೀರೇಂದ್ರ ಹೆಗ್ಗಡೆ ಅವರು ಬೀದರ್ ಜಿಲ್ಲೆಯಲ್ಲಿ ಹೈನು ಅಭಿವೃದ್ಧಿ ಯೋಜನೆ ಹಮ್ಮಿಕೊಂಡು ಕ್ಷೀರಕ್ರಾಂತಿಗೆ ಮುನ್ನುಡಿ ಬರೆದರು’ ಎಂದು ಹೆಗ್ಗಡೆ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ಪಶು ವೈದ್ಯಕಿಯ ವಿಶ್ವವಿದ್ಯಾಲಯ ಬೀದರ್, ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಕಲಬುರಗಿ ಹಾಲು ಒಕ್ಕೂಟಗಳ ಒಳಗೊಂಡ ಸಮಿತಿಯನ್ನು ರಚಿಸಿ 2022ರ ನವೆಂಬರ್ 22ರಂದು ಬೀದರ್ನಲ್ಲಿ ಯೋಜನೆ ಉದ್ಘಾಟಿಸಿದರು. ಮೊದಲ ಹಂತದಲ್ಲಿ ಸ್ಥಗಿತಗೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಹೊಸ ಸಂಘಗಳ ರಚನೆ ಮತ್ತು ಹಾಲು ಉತ್ಪಾದಕರ ಸಂಘಗಳಿಗೆ ಅವಶ್ಯವಿರುವ ಮೂಲಸೌಕರ್ಯ ಒದಗಿಸುವ ಸಲುವಾಗಿ ₹2.45 ಕೋಟಿ ನೀಡಿದರು. ಒಕ್ಕೂಟದ ಮನವಿ ಮೇರೆಗೆ 2ನೇ ಕಂತಿನ ₹2.50 ಕೋಟಿಯನ್ನು ಈ ಕಾರ್ಯಕ್ರಮಕ್ಕೆ ಬಿಡುಗಡೆ ಮಾಡಿದರು’ ಎಂದು ತಿಳಿಸಿದ್ದಾರೆ.

‘ಬೀದರ್ ಜಿಲ್ಲೆಯಲ್ಲಿ ಒಟ್ಟು 17 ಹೊಸ ಹಾಲು ಉತ್ಪಾದಕರ ಸಂಘಗಳ ಕಟ್ಟಡ ನಿರ್ಮಾಣವಾಗಿದೆ. 131 ಸಂಘಗಳಿಗೆ ಹಾಲು ಪರೀಕ್ಷೆ ಆಧುನಿಕ ಯಂತ್ರಗಳನ್ನು ನೀಡಲಾಗಿದೆ. 20 ಸಂಘಗಳಿಗೆ ಫ್ಯಾಟೋಮೇಟಿಕ್ ಮಷಿನ್, 29 ಸಂಘಗಳಿಗೆ ಹಾಲು ಸಂಗ್ರಹಣ ಉಪಕರಣ, 29 ಸಂಘಗಳಿಗೆ ತೂಕದ ಯಂತ್ರಗಳನ್ನು ನೀಡಲಾಗಿದೆ. 40 ಲೀಟರ್ನ 1,672 ಸ್ಟೇನ್ಲೆಸ್ ಸ್ಟೀಲ್ ಹಾಲಿನ ಕ್ಯಾನ್ಗಳನ್ನು ನೀಡುವುದರ ಮೂಲಕ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂ ಕ್ಯಾನ್ಗಳನ್ನು ಬಳಸದೆ ಶುದ್ಧ ಹಾಲು ಉತ್ಪಾದನೆಗೆ ಸಹಕಾರಿ ಆಗಿದೆ. ಹಾಲಿನ ಸಂಘದಲ್ಲಿ ಮಾಸಿಕ ಸಭೆ ಮತ್ತು ತರಬೇತಿಗಳನ್ನು ನೀಡಲು ಅನುಕೂಲವಾಗಲು 38 ಸಂಘಗಳಿಗೆ ಪೀಠೋಪಕರಣಗಳನ್ನು ನೀಡಲಾಗಿದೆ. ಕೃತಕ ಗರ್ಭಧಾರಣೆ ಮಾಡಲು ದ್ರವಸಾರಜನಕದ ಜಾಡಿಯನ್ನು 41 ಸಂಘಗಳಿಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಸಂಸದರ ಅನುದಾನ ಅಡಿಯಲ್ಲಿ ಬೀದರ್ ಜಿಲ್ಲೆಗೆ ಮೂಲಸೌಕರ್ಯಗಳನ್ನು ಒದಗಿಸುವ ಸಲುವಾಗಿ ಮೊದಲ ಮತ್ತು ಎರಡನೇ ಹಂತದ ಯೋಜನೆ ಅಡಿಯಲ್ಲಿ ಒಟ್ಟು ₹5 ಕೋಟಿ ವಿನಿಯೋಗಿಸಲಾಗಿದೆ. ಡಿ.ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ಈ ಸಂದರ್ಭದಲ್ಲಿ ಅವರಿಗೆ ಕಲಬುರಗಿ ಹಾಲು ಒಕ್ಕೂಟದ ಪರವಾಗಿ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.