ಔರಾದ್: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಒಂದು ಕಡೆ ಬೆಳೆ ಹಾನಿಯಾದರೆ ಮತ್ತೊಂದು ಕಡೆ ಹಳ್ಳ, ಕೆರೆ-ಕಟ್ಟೆಗಳು ತುಂಬಿ ಮಳೆಗಾಲದ ವೈಭವ ಮೆರೆಯುತ್ತಿದೆ.

ಕೆರೆಗಳ ತಾಲ್ಲೂಕು ಎಂಬ ಖ್ಯಾತಿ ಪಡೆದ ಔರಾದ್ ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚು ಕೆರೆಗಳಿವೆ. ಈ ಮಳೆಯಿಂದಾಗಿ ಬಹುತೇಕ ಎಲ್ಲ ಕೆರೆಗಳು ತುಂಬಿ ಪರಿಸರದ ಸೌಂದರ್ಯ ಹೆಚ್ಚಿಸಿದೆ.

ತಾಲ್ಲೂಕಿನ ತೇಂಗಪೂರ ಕೆರೆ ಬಹುತೇಕ ತುಂಬಿ ನೀರು ಹೊರ ಹೋಗುತ್ತಿದೆ. ಈ ಹರಿಯುತ್ತಿರುವ ಹಾಲ್ನೊರೆ ಕಂಡು ಸುತ್ತಲಿನ ಜನ ಪುಳಕಿತರಾಗಿದ್ದಾರೆ. ಮಂಗಳವಾರ ಮಳೆ ಬಿಡುವು ಕೊಟ್ಟಾಗ ಸುತ್ತಲಿನ ಶಾಲಾ ಕಾಲೇಜು ಮಕ್ಕಳು ಹಾಗೂ ಸ್ಥಳೀಯರು ಹಾಲ್ನೊರೆ ನೋಡಲು ಮುಗಿದು ಬೀಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಅಮರ ಮೊಕ್ತೆದಾರ ಹೇಳುತ್ತಾರೆ.

ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿಯೂ ತುಂಬಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಒಂದೆಡೆ ಆತಂಕ ಹಾಗೂ ಮತ್ತೊಂದೆಡೆ ಮಳೆ ವೈಭವದ ಸಂಭ್ರಮ ಕಾಣುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಇದು ದೊಡ್ಡ ಮಳೆಯಾಗಿದೆ.

ಬೇಸಿಗೆಯಲ್ಲಿ ಒಣಗಿಹೋಗಿದ್ದ ಅನೇಕ ಕೆರೆಗಳು ಈಗ ಮಳೆಯಿಂದ ತುಂಬಿ ಸಿರಿವಂತವಾಗಿ ಕಂಗೊಳಿಸುತ್ತಿವೆ. ಇದರಿಂದಾಗಿ ನೆಲದಡಿ ನೀರಿನ ಮಟ್ಟ ಏರಿಕೆಯಾಗಿದೆ. ಜಮೀನುಗಳ ಸುತ್ತಮುತ್ತ ಹಸಿರು ಚೈತನ್ಯ ಹರಡಿಕೊಂಡಿದೆ.

ಕೆರೆಗಳು ತುಂಬಿ ಹರಿಯುತ್ತಿರುವ ದೃಶ್ಯವನ್ನು ಕಂಡು ಗ್ರಾಮಸ್ಥರು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದು, ಮಳೆ ನಮಗೆ ನಿಜವಾದ ಜೀವನದ ದಾನ ನೀಡಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.