ಗುರುವಾರ , ಜೂನ್ 30, 2022
25 °C

ಪೌರ ಕಾರ್ಮಿಕರ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ವತಿಯಿಂದ ನಗರದ ವಿವೇಕಾನಂದ ಕಾಲೊನಿಯ ಪಂಚಾಕ್ಷರ ನಿಲಯದ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ವಲಯ ಅರಣ್ಯಾಧಿಕಾರಿ ಶಿವಕುಮಾರ ರಾಠೋಡ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ
ಪ್ರೊ.ಎಸ್.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು.

ಪೌರ ಕಾರ್ಮಿಕರಾದ ಶಿವರಾಜ್ ಹಾಗೂ ಜಗದೇವಿ ಅವರನ್ನು ಸನ್ಮಾನಿಸಲಾಯಿತು. ಪಂಚಾಕ್ಷರ ನಿಲಯ ಕೋವಿಡ್ ವಿಕ್ಟರಿ ಗಾರ್ಡನ್‍ನಲ್ಲಿ ಬೆಳೆಸಿದ ಸಸಿಗಳನ್ನು ಬಡಾವಣೆ ನಿವಾಸಿಗಳಿಗೆ ವಿತರಿಸಲಾಯಿತು.

ಶಾಂಭವಿ, ರಾಜೇಶ್ವರಿ, ಸುರೇಶ ಚಿಟಗುಪಕರ್, ಸಂಜು ಸಜ್ಜನ, ಶಿವಪುತ್ರಪ್ಪ ಪಾಟೀಲ, ಪ್ರಶಾಂತ, ವಿಜಯಕುಮಾರ, ವಿಶ್ವನಾಥ ಮಲಗೊಂಡ, ದಿಲೀಪ ಹುಲಸೂರೆ ಇದ್ದರು.

ವೀರಭದ್ರಪ್ಪ ಉಪ್ಪಿನ ಪ್ರತಿಜ್ಞಾವಿಧಿ ಬೋಧಿಸಿದರು. ದಾನಿ ಬಾಬುರಾವ್ ಸ್ವಾಗತಿಸಿದರು. ದೇವಿಪ್ರಸಾದ ಪಾಲಿಕರ ನಿರೂಪಿಸಿದರು. ಪಂಚಾಕ್ಷರಿ ಕಲ್ಮಠ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.