ಶನಿವಾರ, ಜುಲೈ 2, 2022
22 °C

ಓಲ್ಡ್‌ಸಿಟಿಯಲ್ಲಿ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ತಂಗಿಯನ್ನು ಪೀಡಿಸುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಸಿಂಗಾರಬಾಗ್‌ದ ಅಮಿರ್‌ಖಾನ್‌ ಮೊಜಮ್‌ಖಾನ್ (20) ಕೊಲೆಯಾದ ಯುವಕ. ಪನ್ಸಾಲ್‌ ತಾಲೀಂನ ಝೀಷಾನ್‌ ಕೊಲೆ ಮಾಡಿದ್ದಾನೆ. ಅಮಿರ್‌ಖಾನ್‌, ಝೀಷಾನ್‌ ತಂಗಿಯನ್ನು ಪ್ರೀತಿಸುತ್ತಿದ್ದ. ಮದುವೆ ನಂತರವೂ ಆಕೆಯನ್ನು ಪೀಡಿಸಲು ಶುರು ಮಾಡಿದ್ದ ಎನ್ನಲಾಗಿದೆ. ಅಮಿರ್‌ಖಾನ್‌ ಓಲ್ಡ್‌ಸಿಟಿ ಅಂಗಡಿಯೊಂದರಲ್ಲಿ ಇರುವುದನ್ನು ತಿಳಿದು ಅಲ್ಲಿಗೆ ಬಂದ ಝೀಷಾನ್‌ ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಚಾಕುವಿನಿಂದ ಇರಿಯುವ ದೃಶ್ಯ ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೌಬಾರಾದ ಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.