ಕಮಲನಗರ: ಕೊರೊನಾ ಕಷ್ಟಕಾಲದಲ್ಲಿ ಬದುಕಿನ ಬುತ್ತಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಹುದೊಡ್ಡ ಆಸರೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ತಾಲ್ಲೂಕಿನ ಡಿಗ್ಗಿ ಗ್ರಾಮದ ಮನ್ಮಥ ವಿಶ್ವನಾಥ ಹರಪಳ್ಳೆ ಅವರ ಹೊಲದಲ್ಲಿ ಶನಿವಾರ ನರೇಗಾ ಯೋಜನೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವರು ವಿವಿಧ ಕಾಮಗಾರಿಗೆ ಚಾಲನೆ ಮತ್ತು ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ವಿಶೇಷವಾಗಿ ಜಲಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಹೊಲಗಾಲುವೆ, ಬಸಿಗಾಲುವೆ, ನಾಲೆಗಳ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರೊನಾ ಜಾಗೃತಿ ಹಾಗೂ ಧನಾತ್ಮಕ ಅಂಶಗಳನ್ನು ಪರಿಗಣಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು 40ಕ್ಕಿಂತ ಕಡಿಮೆ ಕೂಲಿಕಾರ್ಮಿಕರು ಕೆಲಸ ಮಾಡಬಹುದು’ ಎಂದು ತಿಳಿಸಿದರು.

ಔರಾದ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಮಾತನಾಡಿ, ‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಕೃಷಿ ಹಾಗೂ ಜಲಸಂರಕ್ಷಣೆಗಾಗಿ ನರೇಗಾ ಅಡಿಯಲ್ಲಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಉಪವಿಭಾಗಾಧಿಕಾರಿ ಗರೀಮಾ ಪನ್ವಾರ್, ತಹಶೀಲ್ದಾರ್ ರಮೇಶ ಪೆದ್ದೇ, ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ತಾ.ಪಂ ಸದಸ್ಯ ಸಚಿನ್ ರಾಠೋಡ್, ಗ್ರಾ.ಪಂ ಅಧ್ಯಕ್ಷ ಸಿದ್ರಾಮ ಬಿರಾದಾರ, ಪಿಡಿಒ ಬಾಬುರಾವ ಸಂಗಮಕರ್, ವಿಜಯಕುಮಾರ ಪಾಟೀಲ, ಸಂಗಮನಾಥ ಬಿರಾದಾರ, ಜೈಪಾಲ, ಪ್ರಾಶಾಂತ ಜಾಧವ, ದಿಲೀಪ ಚವಾಣ್, ಅನೀಲಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.