ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ನೀಟ್: ಫಾಲ್ಕಾನ್ ಕಾಲೇಜಿಗೆ ಉತ್ತಮ ಫಲಿತಾಂಶ

Last Updated 9 ಸೆಪ್ಟೆಂಬರ್ 2022, 14:20 IST
ಅಕ್ಷರ ಗಾತ್ರ

ಬೀದರ್: ಫಾಲ್ಕಾನ್ ಶಿಕ್ಷಣ ಸಂಸ್ಥೆಗಳ ಸಮೂಹವು ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಉತ್ತಮ ಸಾಧನೆಗೈದಿದೆ.

ಕಾಲೇಜಿನ 11 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಗಳಿಸಿ ಗಮನ ಸೆಳೆದಿದ್ದಾರೆ.ಸಚೆ ಮಹಮ್ಮದ್ ಸುಲೆಮಾನ್ 650 ಅಂಕ, ಅದ್ನಾನ್ ಖಾನ್ 647, ಫೌಜಾನ್ ಮಹಮ್ಮದ್ ಸೂಫಿ 640, ಯುಸ್ರಾ ಮರಿಯಮ್ ಎನ್ 638, ತಾಜಮ್ಮುಲ್ ಹುಸೇನ್ 625, ಮಹಮ್ಮದ್ ಸುಲೈಕ್ 618, ಸನಾ ಪರ್ವಿನ್ 617, ಫಜಲು ರೆಹಮಾನ್ 616, ಮಹಮ್ಮದ್ ಅರಫತ್ 615, ಮಹಮ್ಮದ್ ಮುದಸ್ಸಿರ್ 605 ಹಾಗೂ ಹಫ್ಸಾ ತಸನೀಮ್ 602 ಅಂಕ ಪಡೆದಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಫಾಲ್ಕಾನ್ ಕಾಲೇಜು ಹಾಗೂ ನೀಟ್ ಅಕಾಡೆಮಿ ಬೆಂಗಳೂರಿನ ಮುಖ್ಯಶಾಖೆಯ ನೀಟ್ ಫಲಿತಾಂಶ ಅತ್ಯುತ್ತಮವಾಗಿದೆ. ಸರ್ಕಾರಿ ಕೋಟಾದಡಿ 75 ಸೀಟುಗಳು ದೊರಕುವ ನಿರೀಕ್ಷೆ ಇದೆ. ಬರುವ ದಿನಗಳಲ್ಲಿ ವಿವಿಧೆಡೆ ಶಾಖೆಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಫಾಲ್ಕಾನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಸುಭಾನ್ ಸೇಠ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT