ಬೀದರ್: ‘ರಸ್ತೆ ಅಪಘಾತಗಳಿಗೆ ನಿರ್ಲಕ್ಷ್ಯವೇ ಮುಖ್ಯ ಕಾರಣ. ಇದರಿಂದಲೇ ಅಪಘಾತಗಳು ಹೆಚ್ಚಾಗಿ ಸಾವಿನ ಸಂಖ್ಯೆ ಏರುತ್ತಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಸವರಾಜ ಸಿರೋಳಕರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಬೀದರ್ ಆರ್.ಟಿ.ಒ. ಆಗಿ ಅಧಿಕಾರ ಸ್ವೀಕರಿಸಿದ ಅವರಿಗೆ ಮೋಟಾರ್ ವಾಹನ ಚಾಲನಾ ತರಬೇತಿ ಶಾಲೆಗಳ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇತರೆ ತರಬೇತಿ ಶಾಲೆಗಳಿಗೆ ಮಾದರಿಯಾಗುವಂತೆ ಸ್ಥಳೀಯ ಸಂಘ ಕೆಲಸ ಮಾಡಬೇಕು. ಕಲಿಕೆದಾರರಿಗೆ ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ವಾಹನ ಓಡಿಸುವುದು ಕಲಿತವರಿಗೆ ತಾವು ಓಡಿಸುವ ವಾಹನದಲ್ಲಿ ಇತರೆ ವ್ಯಕ್ತಿಗಳಿದ್ದಾರೆ. ಅವರಿಗೂ ಕುಟುಂಬ ಇರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನಿಯಮ ಪಾಲಿಸುತ್ತ ಎಚ್ಚರದಿಂದ ಓಡಿಸಬೇಕು ಎಂದು ಕಿವಿಮಾತು ಹೇಳಿದರು.
ವಾಹನ ತರಬೇತಿ ಶಾಲೆಗಳ ಸಂಘದ ಅಧ್ಯಕ್ಷ ಪ್ರಕಾಶ ಗುಮ್ಮೆ, ಉಪಾಧ್ಯಕ್ಷ ಶಿವರಾಜ ಜಮಾದಾರ, ಸಂಘದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಿರಾದಾರ, ಸಹ ಕಾರ್ಯದರ್ಶಿ ಸಾಗರ ಉಂಡೆ, ಉಮೇಶ ಘೂಳೆ, ಸುಧಾಕರ ಬಿರಾದಾರ, ಸುರೇಶ ಗಾಯಕವಾಡ, ಶೊಯೆಬ್ ಸಿದ್ದಿಕಿ, ಅಹ್ಮದ್ ಖಾನ್, ಶೇರ್ ಖಾನ್ ಜನವಾಡ, ದತ್ತಾತ್ರಿ ಅಷ್ಟಗಿಕರ್, ಶ್ರೀಕಾಂತ, ಹಿರಿಯ ಮೋಟಾರ್ ವಾಹನ ಇನ್‌ಸ್ಪೆಕ್ಟರ್ ಸಾಯಿಪ್ರಸಾದ ಜಿ. ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.