ಬೀದರ್: ‘ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ 68 ಸಾವಿರ ಕಾರ್ಮಿಕರಿಗೆ ಧನಸಹಾಯ ಮಾಡಲಾಗಿದೆ. ಪತ್ರಿಕೆಗಳ ವಿತರಕರು ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಬಹುದಾಗಿದೆ’ ಎಂದು ಕಾರ್ಮಿಕ ಅಧಿಕಾರಿ ರಮೇಶ ಹೇಳಿದರು.
ನಗರದ ಅಂಬೇಡ್ಕರ್ ವೃತ್ತ ಸಮೀಪ ಕಾಂಪ್ಲೆಕ್ಸ್‌ನಲ್ಲಿ ಶ್ರೀವೈಷ್ಣೋದೇವಿ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಲಾಕ್‌ಡೌನ್ ಅವಧಿಯಲ್ಲಿ ಪತ್ರಿಕೆಗಳ ವಿತರಕರು ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ವಿತರಿಸಿ ಕೊರೊನ ವಾರಿಯರ್‌ಗಳಾಗಿ ಗುರುತಿಸಿಕೊಂಡಿದ್ದಾರೆ’ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿಲ್ಲಾ ಘಟಕದ ಅಶೋಕ ಕರಂಜಿ ಮಾತನಾಡಿ, ‘ಬೀದರ್‌ನಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಾಗ ಜನ ಭಯಭೀತರಾಗಿದ್ದರು. ಮನೆಗಳಿಂದ ಹೊರಗೆ ಬರಲು ಹಿಂಜರಿಯುತ್ತಿದ್ದರು. ಆದರೆ, ಪತ್ರಿಕೆ ವಿತರಕರು ಮಾತ್ರ ಓದುಗರಿಗೆ ಸಕಾಲದಲ್ಲಿ ಪತ್ರಿಕೆಗಳನ್ನು ತಲುಪಿಸಿ ಕರ್ತವ್ಯನಿಷ್ಠೆ ತೋರಿದ್ದಾರೆ’ ಎಂದು ಹೇಳಿದರು.
‘ಪತ್ರಿಕೆಗಳ ವಿತರಕರು ಸಂಘವನ್ನು ಸ್ಥಾಪನೆ ಮಾಡಿ ಅದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು’ ಎಂದು ತಿಳಿಸಿದರು.
ಪತ್ರಕರ್ತರಾದ ಚಂದ್ರಕಾಂತ ಮಸಾನಿ ಹಾಗೂ ವರದಿಗಾರರಾದ ಭೀಮರಾವ್ ಬುರಾನಪೂರ ಮಾತನಾಡಿದರು. ಶ್ರೀವೈಷ್ಣೋದೇವಿ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಅವರು ಪತ್ರಿಕೆಗಳ ಏಜೆಂಟರು ಹಾಗೂ ವಿತರಕರಿಗೆ ಸನ್ಮಾನ ಮಾಡಿ ಗೋಡೆ ಗಡಿಯಾರಗಳನ್ನು ಕಾಣಿಕೆಯಾಗಿ ನೀಡಿದರು.
ಪತ್ರಿಕೆ ಏಜೆಂಟರಾದ ಗುರುನಾಥ ಸ್ವಾಮಿ, ಚಂದ್ರಕಾಂತ ಬಿರಾದಾರ, ವೈಜಿನಾಥ ಬಿರಾದಾರ, ಸಂತೋಷ ಬಿರಾದಾರ, ಸುನೀಲ್ ಕಮಠಾಣೆ, ಪ್ರಭಾಕರ್, ಆಕಾಶ, ಭಗವಾನ್, ಸಂಗಮೇಶ ಸ್ವಾಮಿ, ಅಬ್ದುಲ್ ಖಾದ್ರಿ, ಜಾಹೀರಾತು ವಿಭಾಗದ ಪ್ರತಿನಿಧಿಗಳಾದ ದೇವೇಂದ್ರ ಕರಂಜೆ, ಮಾಧವ ಇದ್ದರು. ನಟರಾಜ ಪಾಟೀಲ ಸ್ವಾಗತಿಸಿದರು. ಪ್ರವೀಣ ಕುಂದರಗಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಚಾಂಡೇಶ್ವರೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.