ಸೋಮವಾರ, ಆಗಸ್ಟ್ 15, 2022
26 °C

ಕಮಲನಗರ: ನೀಲಗಾಯ್‌ ಹಿಂಡು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಕಮಲನಗರ ತಾಲ್ಲೂಕಿನ ನಂದಿ ಬಿಜಲಗಾಂವ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ನೀಲಗಾಯ ಹಿಂಡು ಪತ್ತೆಯಾಗಿದೆ.

‘ಉತ್ತರ ಭಾರತದಲ್ಲಿ ಮಾತ್ರ ಕಾಣಸಿಗುವ ನೀಲಗಾಯಗಳು ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕದ ಗಡಿಯಲ್ಲಿ ಸಂಚರಿಸುತ್ತವೆ’ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವಶಂಕರ ತಿಳಿಸಿದ್ದಾರೆ.

‘ಒಂದು ಹಿಂಡು ಕಮಲನಗರ ತಾಲ್ಲೂಕಿನ ಗಡಿಯಲ್ಲಿ ಕುರಚಲು ಅರಣ್ಯ ಪ್ರದೇಶದಲ್ಲಿ ತಿರುಗಾಡುತ್ತಿವೆ. ಹಿಂಡಿನಲ್ಲಿ 15 ನೀಲಗಾಯಗಳು ಇರುವುದನ್ನು ಅರಣ್ಯ ಸಿಬ್ಬಂದಿ ಖಚಿತ ಪಡಿಸಿದ್ದಾರೆ. ಒಂದು ನೀಲಗಾಯದ ಚಿತ್ರವನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೇನೆ. ಜನ ಅವು ವಿಚಿತ್ರ ಪ್ರಾಣಿ ಎಂದು ಗಾಬರಿ ಪಡುತ್ತಿದ್ದಾರೆ. ಇವುಗಳಿಂದ ಯಾವುದೇ ಅಪಾಯ ಇಲ್ಲ’ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.