ಬುಧವಾರ, ಜನವರಿ 19, 2022
23 °C

ಬಸವಕಲ್ಯಾಣ: ಅಫೀಮು ಜಪ್ತಿ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಹಳ್ಳಿ ಗ್ರಾಮದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರ ಹೋಟೆಲ್‍ ಬಾಬಾ ರಾಮದೇವ್‍ ಡಾಬಾದಲ್ಲಿ 3.686 ಕೆ.ಜಿ ಪಾಪಿ (ಅಫೀಮು) ಪೌಡರನ್ನು ಅಬಕಾರಿ ಇಲಾಖೆ‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಜಪ್ತಿಯಾದ ಅಫೀಮು ಸುಮಾರು ₹ 55 ಸಾವಿರದಷ್ಟು ಇದ್ದು, ಕಾನಾರಾಮ ಚತುರಾ ಹಾಗೂ ಜಗದೀಶ ಪ್ರಹ್ಲಾದ್‍ ಕೌಡಿಯಾಳ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ, ನಿರೀಕ್ಷಕ ನಾನಾಗೌಡ ಕೆರೂರ್, ಸುರೇಶ್‍ ಶಂಕರ್, ಸಿಬ್ಬಂದಿ ವಿಶ್ವನಾಥ ಸ್ವಾಮಿ, ಸೈಯದ್‍ ವಸೀಂ, ಮಹಮ್ಮದ್‍ ಮತೀನ್‍ ಅವರಿದ್ದ ತಂಡ ದಾಳಿ ನಡೆಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು