ಶುಕ್ರವಾರ, ಆಗಸ್ಟ್ 12, 2022
23 °C
ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಹೇಳಿಕೆ

ಸಾರ್ವಜನಿಕರಿಗೆ ಆಮ್ಲಜನಕ ಸಾಂದ್ರಕ ಉಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಅಮೆರಿಕದಲ್ಲಿರುವ ಬೀದರ್‌ನವರೇ ಆದ ಡಾ. ಸಚಿನ್ ಕೆ.ಸಿ ಸೇನನ್ ಅವರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ತಿಳಿಸಿದರು.

ನಗರದ ಕೃಷ್ಣ ರಿಜೆನ್ಸಿಯಲ್ಲಿ 5 ಆಮ್ಲಜನಕ ಸಾಂದ್ರಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಮ್ಲಜನಕ ಸಾಂದ್ರಕಗಳ ಅವಶ್ಯಕತೆ ಇರುವವರು ಮೊಬೈಲ್ ಸಂಖ್ಯೆ 9448125349 ,9448223777, 9448110881 9986792323 , 9448226122 ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಕೆ.ಸಿ ಸೇನನ್ ಮಾತನಾಡಿ, ಸ್ನೇಹಿತರ ಸಹಕಾರದಿಂದ ತಮ್ಮ ಪುತ್ರ ಸಚಿನ್ ರೋಟರಿ ಸಂಸ್ಥೆಗಳ ಮೂಲಕ ಕರ್ನಾಟಕಕ್ಕೆ 50 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಬೀದರ್‌ಗೆ 5 ಸಾಂದ್ರಕ ಒದಗಿಸಿದ್ದಾರೆ ಎಂದು ತಿಳಿಸಿದರು.

ಕ್ಲಬ್ ಹಿರಿಯ ಸದಸ್ಯ ಡಾ. ವಿದ್ಯಾಸಾಗರ ಕಾಮತಿಕರ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಮಾಜಿ ಸಹಾಯಕ ಗವರ್ನರ್ ಶಿವಶಂಕರ ಕಾಮಶೆಟ್ಟಿ, ಮಾಜಿ ಅಧ್ಯಕ್ಷ ಅಮರನಾಥ ಡೊಳ್ಳಿ, ಕೋಶಾಧ್ಯಕ್ಷ ಭಗವಂತಪ್ಪ, ಸದಸ್ಯರಾದ ರವಿ ಮೂಲಗೆ, ಗೋಪಾಲ್ ಲೋಯಾ, ಚಂದ್ರ್ರಕಾಂತ ಕಾಡಾದಿ ಇದ್ದರು. ಕ್ಲಬ್ ಕಾರ್ಯದರ್ಶಿ ರಂಜೀತ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸೋಮಶೇಖರ ಪಾಟೀಲ ಸ್ವಾಗತಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ಸುರೇಶ ಚನಶೆಟ್ಟಿ ನಿರೂಪಿಸಿದರು. ಅನಿಲಕುಮಾರ ದೇಶಮುಖ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು