ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಜನಾದಲ್ಲಿ ಪಲ್ಲಕಿ ಮೆರವಣಿಗೆ, ಭಕ್ತರ ಸಂಭ್ರಮ

Published 15 ಮೇ 2024, 14:41 IST
Last Updated 15 ಮೇ 2024, 14:41 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ಬುಧವಾರ ಬಾವಾ ಸ್ವಾಮಿ ಜಾತ್ರಾ ಉತ್ಸವ ಸಂಭ್ರಮದಿಂದ ನಡೆಯಿತು.

ದೇವಸ್ಥಾನದಲ್ಲಿ ಬೆಳಿಗ್ಗೆ ನಡೆದ ವಿಶೇಷ ಪೂಜೆ ನಂತರ ಇಡೀ ಊರಲ್ಲಿ ಪಲ್ಲಕಿ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಯುವಕರು ಡಿಜೆ ಹಾಡಿನ ಮೇಲೆ ಕುಣಿದು ಸಂಭ್ರಮಿಸಿದರು. ಜಾನಪದ ನೃತ್ಯದ ಮೇಲೆ ಮಹಿಳೆಯರು ಹೆಜ್ಜೆ ಹಾಕಿ ಭಕ್ತಿ ಭಾವ ಮೆರೆದರು.

‘ಬಾವಾ ಸ್ವಾಮಿ ನಮ್ಮ ಊರಿನ ಆರಾಧ್ಯ ದೇವರು. ಊರಿನ ಎಲ್ಲ ಸಮುದಾಯದವರು ಸೇರಿ ಪ್ರತಿ ವರ್ಷ ಜಾತ್ರಾ ಉತ್ಸವ ಆಚರಿಸುತ್ತೇವೆ. ಉತ್ಸವ ಮುನ್ನ ಏಳು ದಿನಗಳ ಕಾಲ ಸಪ್ತಾಹ ನಡೆಸಿ ನಿತ್ಯ ಪೂಜೆ, ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಇದು ನಮ್ಮ ಊರಿನಲ್ಲಿ ನಡೆಯುವ ಭಾವೈಕ್ಯದ ಹಬ್ಬ’ ಎಂದು ಊರಿನ ಹಿರಿಯ ನಾಗರಿಕ ಬಾಬುರಾವ ಸಜ್ಜನಶೆಟ್ಟಿ ಹೇಳಿದರು.

ಷಣ್ಮುಖಪ್ಪ ಕೌಟಗೆ, ಗದಗೆಪ್ಪ ಸಿದ್ದೇಶ್ವರೆ, ಶಂಕರ ಅವಳಗಾವೆ, ರವಿ ಮೇತ್ರೆ, ನಾಗಶೆಟ್ಟಿ ಪಾಟೀಲ, ಪ್ರಶಾಂತ ಬಿರಾದಾರ, ಹಾವಪ್ಪ ಪಾಟೀಲ, ಶಿವರಾಜ ಮದರಗಾವೆ, ವಿಠಲ್ ಮಾಲಿಪಾಟೀಲ, ಕಲ್ಲಯ್ಯ ಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT