ಗುರುವಾರ , ಮಾರ್ಚ್ 30, 2023
22 °C

ನೀಟ್‍ನಲ್ಲಿ ಸಪ್ತಗಿರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ನಗರದ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ವೆಂಕಟೇಶ ಪಾಂಡುರಂಗ 2,707ನೇ ರ್‍ಯಾಂಕ್ ಗಳಿಸಿದ್ದಾರೆ.

ವೆಂಕಟೇಶ ಪ್ರಸಕ್ತ ವರ್ಷದ ಜೆಇಇ ಮೇನ್ಸ್ ಪರೀಕ್ಷೆಯಲ್ಲೂ ರಾಷ್ಟ್ರಮಟ್ಟದಲ್ಲಿ 685ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದರು. ಅವರು ಸೂರತ್ಕಲ್ ಎನ್‍ಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ.

ಕಾಲೇಜಿನ ರಾಮ ಬಸಪ್ಪ, ಸೋನಿ ನಾರಾಯಣ, ಮಾನ್ಸಿ ಶ್ರೀಹರಿ, ವಿನಯ ವಿಷ್ಣುಕಾಂತ ತಾಂದಳೆ, ಶ್ರುತಿ ಚಂದ್ರಕಾಂತ, ನಿಶಾಂತ ಚಂದ್ರಕಾಂತ ಅವರು ನೀಟ್‍ನಲ್ಲಿ ಉತ್ತಮ ಅಂಕ ಗಳಿಸಿದ್ದು, ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅಂಜಲಿ ಅಂಬರೀಷ್ ಶೇ 90 ಅಂಕ ಪಡೆದಿದ್ದಾರೆ. ಜೆ.ಎಸ್. ರೋಷನ್, ನಾಗರಾಜ ಎಂ, ವೈಷ್ಣವಿ ವಿ. ಯಾದವ್, ಗಣೇಶ ಜಿ., ಜೆಡ್ಸನ್, ಸಿದ್ಧಲಿಂಗ ಇ, ಪ್ರಜ್ವಲ್ ಎಂ, ಮಂಜುಳಾ ಎಸ್, ಶಾಂತಕುಮಾರ ಎಸ್, ಗಣೇಶ ಡಿ, ಪ್ರೇಮಕುಮಾರ ಜಿ, ಪ್ರಕಾಶ ಬಿ., ಸ್ನೇಹಾ ಎಸ್. ಹಾಗೂ ಲಕ್ಷ್ಮಿ ಇ. ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಡಿ. ತಾಂದಳೆ ಹಾಗೂ ಕಾರ್ಯದರ್ಶಿ ಗೋಪಾಲ ಡಿ. ತಾಂದಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.