ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫುಲೆ ದಂಪತಿ ಕಾರ್ಯ ಶ್ಲಾಘನೀಯ’

Last Updated 6 ಜನವರಿ 2022, 6:05 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಆಧುನಿಕ ಸಮಾಜದಲ್ಲಿ ಎಲ್ಲ ರಂಗಗಳಲ್ಲಿ ಮಹಿಳೆ ಮುಂಚೂಣಿ ಯಲ್ಲಿರುವುದಕ್ಕೆ ಮೂಲ ಕಾರಣ ಸಾವಿತ್ರಿಬಾಯಿ ಫುಲೆ ಅವರ ಅವಿರತ ಶ್ರಮ’ ಎಂದು ಮುಖ್ಯಶಿಕ್ಷಕಿ ಸುಗಂಧಾ ಅವರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಾಂಗಲೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯ ರತ್ನ ಅಣ್ಣಾಬಾವು ಸಾಠೆ ಲೋಮಂಚ ನ್ಯಾಸ ಸಹಯೋಗದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಎಲ್ಲರೂ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಿಕ್ಷಕ ಶಿವಕುಮಾರ ಹೂಗಾರ ಮಾತನಾಡಿ,‘ಫುಲೆ ದಂಪತಿ ಅಕ್ಷರಗಳನ್ನು ಬಳಸಿ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ವಿಶೇಷವಾಗಿ ನಿರ್ಗತಿಕರಿಗೆ, ಗರ್ಭಿಣಿಯರಿಗೆ, ವಿಧವೆಯವರಿಗೆ ಆಶ್ರಯದಾತರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದರು.

ಶಿಕ್ಷಕಿಯರಾದ ಶೋಭಾ, ಭುವನೇಶ್ವರಿ, ಗಾಯತ್ರಿ, ಕವಿತಾ, ಪ್ರತಿಭಾ ಹಾಗೂ ಇತರರನ್ನು ಸನ್ಮಾನಿಸಲಾಯಿತು.

ಪ್ರಭಾವತಿ, ಎಂ.ಎಸ್.‌ ಮನೋಹರ್‌, ಮಲ್ಲಯ್ಯ ಸ್ವಾಮಿ, ಧರ್ಮಪ್ರಕಾಶ್‌ ಹಾಗೂ ಮಸ್ತಾನ ಇದ್ದರು.

ಶಿವಕುಮಾರ ನಿರೂಪಿಸಿದರು. ರಾಜಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT