ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಟ್ಟು ಜನ್ಮದಿನ ಆಚರಿಸಿ

Last Updated 17 ಜೂನ್ 2021, 15:19 IST
ಅಕ್ಷರ ಗಾತ್ರ

ಬೀದರ್: ಪರಿಸರ ಸಂರಕ್ಷಣೆಗೆ ಪೂರಕವಾಗಿ ಪ್ರತಿಯೊಬ್ಬರೂ ತಮ್ಮ ಜನ್ಮದಿನವನ್ನು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕು ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ರವೀಂದ್ರಕುಮಾರ ಭೂರೆ ಸಲಹೆ ಮಾಡಿದರು.

ನಗರದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್‍ನಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಪರಿಸರಕ್ಕಾಗಿ ಮರ ಗಿಡಗಳು ಅಗತ್ಯವಾಗಿವೆ. ನಗರದ ಜನ ಮನೆಗೊಂದು ಸಸಿ ನೆಡಬೇಕು ಎಂದು ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಇರ್ಷಾದ್ ಅಲಿ ಮನವಿ ಮಾಡಿದರು.

ಡಾ. ಗೌತಮ ಅರಳಿ, ಡಾ. ಯೋಗೇಂದ್ರ ಕುಲಕರ್ಣಿ, ಡಾ. ಬಸವರಾಜ ನಿಟ್ಟೂರೆ, ಡಾ. ಇಲಿಯಾಸ್, ವಿಠ್ಠಲ ಕಲ್ಯಾಣ, ಜಕಿವುದ್ದಿನ್, ವಿಶ್ವನಾಥ ಬಾದಾಮಿ, ಗುರುರಾಜ ಕಿಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT