ಗುರುವಾರ , ಆಗಸ್ಟ್ 5, 2021
28 °C

ಅಂಗಡಿ: ಅವಧಿ ವಿಸ್ತರಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಟಗುಪ್ಪ: ‘ಪಟ್ಟಣದಲ್ಲಿ ಸಂಜೆಯವರೆಗೂ ಅಂಗಡಿ ತೆರೆಯಲು ತಾಲ್ಲೂಕು ಆಡಳಿತ ಅನುಮತಿ ನೀಡಬೇಕು’ ಎಂದು ಪುರಸಭೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ, ಸುಭಾಷ ಕುಂಬಾರ ಆಗ್ರಹಿಸಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೂ ಅಂಗಡಿಗಳನ್ನು ತೆರೆಯಲು ಆದೇಶ ನೀಡಿದೆ. ಸುತ್ತಲಿನ ಗ್ರಾಮಗಳಿಂದ ಜನ ಬರುವುದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಮಾಸ್ಕ್ ಧರಿಸುತ್ತಿಲ್ಲ. ಈ ಜನದಟ್ಟಣೆ ನಿಯಂತ್ರಿಸಲು ತಕ್ಷಣ ಸಂಜೆಯವರೆಗೂ ಅಂಗಡಿಗಳು ತೆರೆದು ವ್ಯವಹಾರ ನಡೆಸಲು ಅನುಮತಿ ನೀಡಿಬೇಕು. ಇದರಿಂದ ಜನದಟ್ಟಣೆ ಆಗುವುದಿಲ್ಲ. ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.