ಕಮಲನಗರ: ತಾಲ್ಲೂಕಿನ ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದನೂರ ಮತ್ತು ಖತಗಾಂವ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ 2024-25 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಮಂಜೂರಾತಿ ಆದೇಶ ಪತ್ರ ವಿತರಣಾ ಸಮಾರಂಭ ನಡೆಯಿತು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮದನೂರ ಮತ್ತು ಖತಗಾಂವ ಗ್ರಾಮಕ್ಕೆ 239 ಮನೆಗಳು ಅನುಮೋದನೆಗೊಂಡಿದ್ದು ಅರ್ಹ 187 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಬೇಲ್ಲೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ, ‘ಮದನೂರ ಮತ್ತು ಖತಗಾಂವ ಗ್ರಾಮಗಳನ್ನು ‘ಗುಡಿಸಲು ಮುಕ್ತ ಗ್ರಾಮ’ ಮಾಡುವ ಗುರಿ ಹೊಂದಲಾಗಿದೆ. ಪಾರದರ್ಶಕ ವ್ಯವಸ್ಥೆ ಮೂಲಕ ಫಲಾನುಭವಿಗಳ ಆಯ್ಕೆ ನಡೆದಿದ್ದು ಸೂಕ್ತ ಸಮಯದಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದರು.

ಈ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮೊದಲ ಕಂತಿನ ₹30 ಸಾವಿರ ಮನೆ ನಿರ್ಮಾಣ ಮಾಡುವ ಮುನ್ನಜಮೆ ಆಗಲಿದೆ. ತಕ್ಷಣವೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದರೆ ಪ್ರಗತಿ ಆಧಾರದ ಮೇಲೆ 2ನೇ ಕಂತಿನಲ್ಲಿ ₹60 ಸಾವಿರ ಮತ್ತು 3ನೇ ಕಂತಿನಲ್ಲಿ ₹30 ಸಾವಿರ ಹಣ ಬಿಡುಗಡೆ ಆಗುತ್ತದೆ. ಹಣ ನೇರವಾಗಿ ಖಾತೆಗೆ ಜಮೆ ಆಗುತ್ತದೆ. ಮಂಜೂರಾತಿ ಬಳಿಕ ಮೊದಲ ಕಂತಿನ ಹಣ ಬಂದ ಕೂಡಲೇ ಕಾಮಗಾರಿ ಆರಂಭಿಸಿ ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.

ಬೀದರ್ ಸಂಸದ ಸಾಗರ್ ಖಂಡ್ರೆ ಕಚೇರಿಯ ಸಿಬ್ಬಂದಿ ಭಾಗವಹಿಸಿ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿವರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹರಬಾಜಿ ಶಿಂಧೆ, ಸದಸ್ಯರಾದ ಇಸ್ಮಾಯಿಲ್ ಸೈಯದ್, ಶೋಭಾ ವಿಶ್ವನಾಥ್, ರಾಜಕುಮಾರ್ ಧರಣೆ, ಪಿಡಿಒ ರಂಗಾಚಾರಿ ನರೋಜ, ಮಹೇಶ, ಗೋರಕನಾಥ್ ಸಾವಳೆ, ರಾಹುಲ್ ಪಿಚರಟೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.