ಮಂಗಳವಾರ, ಮಾರ್ಚ್ 28, 2023
23 °C

ಪ್ರಭುರಾವ್ ಕಂಬಳಿವಾಲೆ ಕೃತಿ ಬಿಡುಗಡೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನ. 6 ರಂದು ಮಧ್ಯಾಹ್ನ 12ಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪ್ರಭುರಾವ್ ಕಂಬಳಿವಾಲೆ ಕುರಿತ ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸುವರು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸುವರು.

ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸುವರು.

ಬಿ. ವೀರಬಸವಂತರಾಯ ಅವರು ರಚಿಸಿದ ಬೀದರ್ ಜಿಲ್ಲೆಯ ಕನ್ನಡ ಬಾಬಾ ಶ್ರೀ ಪ್ರಭುರಾವ್ ಕಂಬಳಿವಾಲೆ (ಕನ್ನಡ), ಡಾ. ಮನೋಹರ ಭಂಡಾರೆ ರಚಿತ ಪ್ರಭುರಾವ್ ಕಂಬಳಿಬಾಬಾ: ವ್ಯಕ್ತಿ ಆಣಿ ಕಾರ್ಯ (ಮರಾಠಿ) ಹಾಗೂ ಡಾ. ಶ್ರೀನಿವಾಸ ಸಿರನೂರಕರ ಬರೆದ ಪ್ರಭುರಾವ್ ಕಂಬಳಿವಾಲೆ ದಿ ಮ್ಯಾನ್ ಹು ಲಿವ್ಡ್ ಫಾರ್ ಆದರ್ (ಇಂಗ್ಲಿಷ) ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವೆ ಪ್ರತಿಷ್ಠಾನದ ಶಾಂತಕುಮಾರ ಉದಗೀರೆ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.