ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಕ್ವಿಜ್‌ ವಿಜೇತರಿಗೆ ಬಹುಮಾನ

Last Updated 19 ಡಿಸೆಂಬರ್ 2020, 10:30 IST
ಅಕ್ಷರ ಗಾತ್ರ

ಬೀದರ್‌: ಓದುಗರಿಗಾಗಿ ‘ಪ್ರಜಾವಾಣಿ’ ಏರ್ಪಡಿಸಿರುವ ರಸಪ್ರಶ್ನೆ ಸ್ಪರ್ಧೆಯ ಹಲವು ವಿಜೇತರು ಬಹುಮಾನ ಪಡೆದು ಖುಷಿಪಟ್ಟರು. ಓದುಗರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಈ ‘ಓದುಗರ ಕ್ವಿಜ್‌’ಗೆ ಪ್ರತಿ ದಿನವೂ ಉತ್ತರಗಳ ಮಹಾಪೂರವೇ ಹರಿದುಬಂತು.

‘ಮನೆ ಹಾಗೂ ನಮ್ಮ ಹೋಟೆಲ್‌ಗೆ ‘ಪ್ರಜಾವಾಣಿ’ಯನ್ನೇ ತರಿಸುತ್ತೇವೆ. ‘ಪ್ರಜಾವಾಣಿ’ ಓದದಿದ್ದರೆ ಏನೋ ಕಳೆದುಕೊಂಡು ಆಗುತ್ತದೆ. ನಿತ್ಯ ಎರಡು ತಾಸು ಪತ್ರಿಕೆ ಓದಿದ ಮೇಲೆಯೇ ನನಗೆ ತೃಪ್ತಿಯಾಗುತ್ತದೆ. ಪ್ರಜಾವಾಣಿ ಕ್ವಿಜ್‌ಗೆ ಸರಿಯಾಗಿ ಉತ್ತರ ಬರೆದು ಕಳಿಸಿದ್ದೆ. ನನಗೆ ಬಹುಮಾನ ಗೆಲ್ಲುವ ವಿಶ್ವಾಸವೂ ಇತ್ತು. ಪ್ರಶಸ್ತಿ ಬಂದ ಮೇಲೆ ಬಹಳ ಖುಷಿಯಾಗಿದೆ. ಪ್ರಜಾವಾಣಿ ಓದುಗರಿಗೆ ಎಲ್ಲ ಬಗೆಯ ಮಾಹಿತಿಯನ್ನೂ ಕೊಡುತ್ತಿದೆ. ಮನೆ ಅಥವಾ ಉದ್ಯೋಗದಲ್ಲಿದ್ದರೂ ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. ಇದು ನನ್ನ ನೆಚ್ಚಿನ ಪತ್ರಿಕೆಯೂ ಆಗಿದೆ’ ಎಂದುಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದ ಹೋಟೆಲ್‌ ಉದ್ಯಮಿ ವಿಲಾಸ ಶರಣಪ್ಪ ಪಂಗರಗಿ ಹೇಳಿದರು.

‘ಈಗಷ್ಟೇ ಬಿಎಸ್‌ಸಿ ಪದವಿ ಪೂರ್ಣಗೊಳಿಸಿದ್ದೇನೆ. 5 ವರ್ಷಗಳಿಂದ ಮನೆಗೆ ‘ಪ್ರಜಾವಾಣಿ’ ಪತ್ರಿಕೆಯನ್ನೇ ತರಿಸಿಕೊಳ್ಳುತ್ತಿದ್ದೇನೆ. ‘ಪ್ರಜಾವಾಣಿ’ಯಲ್ಲಿ ಸಮಗ್ರವಾದ ಮಾಹಿತಿ ಇರುತ್ತದೆ. ಪರಿಪೂರ್ಣವಾದ ಸುದ್ದಿಗಳು ಇರುವುದರಿಂದ ಎಲ್ಲ ಪ್ರಜಾವಾಣಿಯೇ ನನಗೆ ಇಷ್ಟ’ ಎಂದು ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದ ಮಹಾದೇವಿ ಸಿದ್ರಾಮ ಹೇಳಿದರು.

‘ಪ್ರಜಾವಾಣಿ ಕ್ವಿಜ್‌ನ ಜಾಹೀರಾತು ಪ್ರಕಟವಾದ ನಂತರ ನಾನು ಇನ್ನಷ್ಟು ಆಸಕ್ತಿಯಿಂದ ಪತ್ರಿಕೆಯನ್ನು ಓದಲು ಶುರು ಮಾಡಿದೆ. ಪತ್ರಿಕೆಯಲ್ಲಿ ಪ್ರಕಟವಾದ ರಸಪ್ರಶ್ನೆಗಳು ನನಗೆ ಕಠಿಣ ಎನಿಸಲಿಲ್ಲ. ಎಲ್ಲವನ್ನೂ ಸರಿಯಾಗಿ ಉತ್ತರಿಸಿ ಬರೆದು ಕಳಿಸಿದೆ. ಅದಕ್ಕೆ ಪ್ರತಿಯಾಗಿ ಬಹುಮಾನ ದೊರಕಿರುವುದು ಬಹಳ ಖುಷಿ ಉಂಟು ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT