ಭಾಲ್ಕಿ: ಇಲ್ಲಿಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿ ಮಂಗಳವಾರ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ವಿರೋಧಿಸಿ, ಕನ್ನಡದಲ್ಲಿ ಎಲ್ಲ ರೀತಿಯ ಸೇವೆಯನ್ನು ಕೊಡಲು ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಪ್ರಮುಖರು, ಸಂವಿಧಾನದ ಆಶಯದಂತೆ ಎಲ್ಲ ಜನರಿಗೆ, ಎಲ್ಲ ಭಾಷೆಗೆ ಸಮಾನವಾಗಿ ಬೆಳೆಯುವ, ಬದುಕುವ ಮೂಲಭೂತ ಹಕ್ಕು ಇದೆ. ಉತ್ತರ ಭಾರತದ ಒಂದೆರಡು ರಾಜ್ಯದಲ್ಲಿ ಮಾತನಾಡುವ ಭಾಷೆಯನ್ನೇ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಹುನ್ನಾರ ಇದಾಗಿದೆ. ಕನ್ನಡಿಗರನ್ನು ಉದ್ಯೋಗದಿಂದ ವಂಚಿತರನ್ನಾಗಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.

ಬ್ಯಾಂಕ್‌ನ ಎಲ್ಲ ಸೇವೆಗಳಿಗೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು, ಕರ್ನಾಟಕದಲ್ಲಿ ಕನ್ನಡಿಗರನ್ನು ಬ್ಯಾಂಕ್ ಉದ್ಯೋಗಿಗಳನ್ನಾಗಿ ನೇಮಿಸಬೇಕು ಎಂದು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಜಿ. ಪಾಟೀಲ, ಪ್ರಮುಖರಾದ ಅಭಿಜೀತ ಬಿರಾದಾರ, ಅಜಯ, ರಮೇಶ ಚಿದ್ರಿ, ಅನಿಲ್ ದಾಡಗೆ, ದಶರಥ ಢೋಳೆ, ಸಾಗರ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.